ಕಾಬೂಲ್ (ಅಫ್ಘಾನಿಸ್ತಾನ):ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಪಲಾಯನವಾಗುವ ವೇಳೆ ಎರಡು ತಿಂಗಳ ಮಗುವೊಂದು ತನ್ನ ತಾಯಿಯಿಂದ ಬೇರ್ಪಟ್ಟಿದ್ದು, ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಟರ್ಕಿಶ್ ಸೈನಿಕರು ಈ ಕಂದಮ್ಮನನ್ನು ಆರೈಕೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಬೂಲ್ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳಾಂತರವಾಗುವ ವೇಳೆ ಫರಿಸ್ತಾ ರಹಮಾನಿ ಎಂಬ ಮಹಿಳೆ ತನ್ನ ಮಗು ಮತ್ತು ಪತಿ ಅಲಿ ಮೂಸಾ ರಹಮಾನಿಯಿಂದ ಬೇರೆಯಾಗಿದ್ದಾರೆ.
ಮಗುವನ್ನು ಎತ್ತಿಕೊಂಡು ಹತಾಶೆಯಿಂದ ನಿಂತಿದ್ದ ತಂದೆಯನ್ನು ನೋಡಿದ ಟರ್ಕಿ ದೇಶದ ಸೈನಿಕರು, ಅವರ ಸಹಾಯಕ್ಕೆ ಬಂದಿದ್ದಾರೆ. ತಂದೆ-ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು, ಕಂದಮ್ಮನಿಗೆ ಆಹಾರದ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಇಲ್ಲಿಯವರೆಗೆ ಸ್ಥಳಾಂತರ ಆದವರೆಷ್ಟು? ಭಾರತಕ್ಕೆ ಬಂದವರೆಷ್ಟು?
ಎರಡು ದಶಕಗಳ ಬಳಿಕ ಅಫ್ಘಾನಿಸ್ತಾನದ ಚಿತ್ರಣವೇ ಬದಲಾಗಿದೆ. ಇಡೀ ದೇಶವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರಿಂದ ರಕ್ಷಿಸಿಕೊಳ್ಳಲು ಅಲ್ಲಿನ ಪ್ರಜೆಗಳು ಸ್ಥಳಾಂತರಗೊಳ್ಳುತ್ತಿದ್ದಾರೆ. ಜನಸಂದಣಿ ನಡುವೆ ತಮ್ಮ ಪ್ರಾಣ-ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ.