ಇಜ್ಮಿರ್ (ಟರ್ಕಿ):ಟರ್ಕಿ ಮತ್ತು ಗ್ರೀಸ್‌ನ ವಿವಿಧ ಭಾಗಗಳಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು ಪವಾಡ ಸದೃಶ್ಯ ರೀತಿಯಲ್ಲಿ ಇಜ್ಮಿರ್ ಪ್ರದೇಶದಲ್ಲಿನ ಕಟ್ಟಡವೊಂದರ ಅವಶೇಷದಡಿ ಸಿಲುಕಿದ್ದ ಯುವತಿಯೊಬ್ಬಳನ್ನು ನಾಲ್ಕು ದಿನಗಳ ನಂತರ ರಕ್ಷಣೆ ಮಾಡಲಾಗಿದೆ.
ಟರ್ಕಿಯಲ್ಲಿ ಪ್ರಬಲ ಭೂಕಂಪ; ನಾಲ್ಕು ದಿನಗಳ ಬಳಿಕ ಕಟ್ಟಡದ ಅವಶೇಷದಡಿ ಸಿಲುಕಿದ್ದ ಯುವತಿಯ ರಕ್ಷಣೆ - ಪ್ರಬಲ ಭೂಕಂಪ 2020
ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 102 ಕ್ಕೆ ಏರಿದೆ. ಏತನ್ಮಧ್ಯೆ ಅಪಾರ್ಟ್ಮೆಂಟ್ವೊಂದರ ಕಟ್ಟಡದ ಅವಶೇಷದ ಸಿಲುಕಿದ್ದ ಯುವತಿಯೊಬ್ಬಳನ್ನು ಅಲ್ಲಿಯ ಶೋಧ ಮತ್ತು ರಕ್ಷಣಾ ತಂಡ ಸಾವಿನ ದವಡೆಯಿಂದ ಪಾರು ಮಾಡಿದೆ.

ಇಲ್ಲಿಯ ಶೋಧ ಮತ್ತು ರಕ್ಷಣಾ ತಂಡವು ಕಟ್ಟಡದ ಅಡಿ ಸಿಲುಕಿದ್ದ ಐಡಾ ಗೆಜ್ಗಿನ್ ಎಂಬ ಯುವತಿಯನ್ನು ಹೊರಗೆ ಕರೆತರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಬಲ ಭೂಕಂಪನದಿಂದ ಇಜ್ಮಿರ್ ಪ್ರದೇಶದಲ್ಲಿನ ಕಟ್ಟಡ ಕುಸಿದಿದ್ದು ಅವಶೇಷದಡಿ ಸಿಲುಕಿದ್ದ ಯುವತಿ ಐಡಾ ಗೆಜ್ಗಿನ್ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದು ಬಂದದ್ದನ್ನು ಕಂಡು ಸ್ಥಳೀಯರು ಆಚ್ಚರಿ ಸಹ ವ್ಯಕ್ತಪಡಿಸಿದ್ದಾರೆ.
ಇನ್ನು ಟರ್ಕಿಯ ಮೂರನೇ ಅತಿದೊಡ್ಡ ನಗರದವಾದ ಇಜ್ಮಿರ್ ಪ್ರದೇಶದ ಅವಶೇಷದಡಿ ಲೆಕ್ಕಕ್ಕೆ ಸಿಗದಷ್ಟು ಜನ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಿನ ಮೃತದೇಹಗಳು ಇದೇ ಕಟ್ಟಡದಲ್ಲಿ ಪತ್ತೆಯಾಗುತ್ತಿದ್ದು ಶೋಧ ಮತ್ತು ರಕ್ಷಣಾ ತಂಡ ತನ್ನ ಕಾರ್ಯಾಚರಣೆಯನ್ನು ಮುಂದುವರೆದಿದೆ. ಮಾಹಿತಿ ಪ್ರಕಾರ ಇಲ್ಲಿಯವರೆಗೆ ಪ್ರಬಲ ಭೂಕಂಪನದ ಅನಾಹುತದಿಂದ 102 ಜನರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಯು.ಎಸ್. ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾದರೆ, ಟರ್ಕಿಯ ಇತರೆ ಏಜೆನ್ಸಿಗಳು ಕಡಿಮೆ ತೀವ್ರತೆ ದಾಖಲಿಸಿವೆ.