ವಾಷಿಂಗ್ಟನ್:ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕ ಸೇನೆ ಬೀಡು ಬಿಟ್ಟಿರುವ ಅಲ್-ಬಲಾದ್ ವಾಯುನೆಲೆ ಮೇಲೆ ಇರಾನ್ ಎರಡು ರಾಕೆಟ್ ದಾಳಿ ನಡೆಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನೇಕ ಅಮೆರಿಕನ್ನರನ್ನ ಕೊಂದು ಹಲವರನ್ನ ಗಾಯಗೊಳಿಸಿದ್ದ ಅವರ (ಇರಾನ್) ಭಯೋತ್ಪಾದಕ ನಾಯಕನ ಜಗತ್ತನ್ನ ನಾವು ತೊಡೆದುಹಾಕಲು ಪ್ರಯತ್ನಿಸಿದೆವು. ಆದರೆ ಇದಕ್ಕೆ ಪ್ರತೀಕಾರವಾಗಿ ಕೆಲವು ಅಮೆರಿಕ ಆಸ್ತಿಗಳನ್ನು ಗುರಿಯಾಗಿಸುವ ಬಗ್ಗೆ ಇರಾನ್ ತುಂಬಾ ಧೈರ್ಯದಿಂದ ಮಾತನಾಡುತ್ತಿದೆ.
ನೂರಾರು ಇರಾನಿನ ಪ್ರತಿಭಟನಾಕಾರರು ಸೇರಿದಂತೆ ಆತ ಕೊಂದ ಎಲ್ಲರ ಹೆಸರನ್ನ ಇಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ. ಅವರು ನಮ್ಮರಾಯಭಾರ ಕಚೇರಿ ಸೇರಿದಂತೆ ಇತರೆ ಸ್ಥಳಗಳ ಮೇಲೆ ದಾಳಿನಡೆಸಲು ತಯಾರಿ ನಡೆಸುತ್ತಿದ್ದರು. ಇರಾನ್ ಅನೇಕ ವರ್ಷಗಳಿಂದ ಸಮಸ್ಯೆಗಳಲ್ಲದೆ ಮತ್ತೇನು ಅಲ್ಲ.
ಇರಾನ್ ಯಾವುದೇ ಅಮೆರಿಕನ್ನರು ಅಥವಾ ಅಮೆರಿಕದ ಸ್ವತ್ತುಗಳನ್ನು ಹೊಡೆದರೆ, ನಾವು ಕೂಡ ಇರಾನ್ನ 52 ಸ್ಥಳಗಳೆಡೆಗೆ ಗುರಿ ಇಟ್ಟಿದ್ದೇವೆ(ಹಲವು ವರ್ಷಗಳ ಹಿಂದೆ ಇರಾನ್ ತೆಗೆದುಕೊಂಡ 52 ಅಮೆರಿಕನ್ ಒತ್ತೆಯಾಳುಗಳನ್ನು ಪ್ರತಿನಿಧಿಸುತ್ತವೆ) ಈ 52 ರಲ್ಲಿ ಕೆಲವು ಉನ್ನತ ಮಟ್ಟದ ಸ್ಥಳಗಳಾಗಿದ್ದು, ಇರಾನ್ ಮತ್ತು ಇರಾನಿನ ಸಂಸ್ಕೃತಿಗೆ ಮುಖ್ಯವಾದ ಸ್ಥಳಗಳ ಮೇಲೆ ನಾವು ದಾಳಿ ನಡೆಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಇರಾಕ್ ರಾಜಧಾನಿ ಬಾಗ್ದಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ಈ ವೇಳೆ ಕಾರಿನಲ್ಲಿದ್ದ ಇರಾನ್ ಸೇನಾ ಮುಖ್ಯಸ್ಥ ಸೊಲೇಮನಿ ಹಾಗೂ ಸೇನೆಯ ಉಪ ಮುಖ್ಯಸ್ಥ ಅಬು ಮೆಹದಿ ಅಲ್ ಮುಹಂದಿಸ್ ಇಬ್ಬರೂ ಬಲಿಯಾಗಿದ್ದರು. ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿತ್ತು. ಈ ಘಟನೆ ಮತ್ತೊಂದು ರೂಪ ಪಡೆದುಕೊಂಡಿದೆ.