ಕರ್ನಾಟಕ

karnataka

ETV Bharat / international

'ಮರ ರಾತ್ರಿ ವೇಳೆ ಆಮ್ಲಜನಕ ಬಿಡುಗಡೆ ಮಾಡುತ್ತದೆ': ಇಮ್ರಾನ್​ ಖಾನ್ ಮಾತಿಗೆ ನೊಬೆಲ್​ ನೀಡಿ ಎಂದ್ರು ನೆಟ್ಟಿಗರು..! - ಆಮ್ಲಜನಕದ ಬಗ್ಗೆ ಪಾಕ್ ಪ್ರಧಾನಿ ವಿಚಿತ್ರ ಹೇಳಿಕೆ

ಇತ್ತೀಚೆಗೆ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಇಮ್ರಾನ್ ಖಾನ್ ಆಡಿದ ಮಾತು ಸದ್ಯ ನೆಟ್ಟಿಗರ ಪಾಲಿಗೆ ಹಾಸ್ಯದ ವಸ್ತುವಾಗಿದೆ.

Trees produce oxygen at night says Imran Khan
ಇಮ್ರಾನ್​ ಖಾನ್

By

Published : Nov 28, 2019, 9:54 AM IST

ಇಸ್ಲಾಮಾಬಾದ್:ನಯಾ ಪಾಕಿಸ್ತಾನ್ ಘೋಷವಾಕ್ಯ ಹೇಳುತ್ತಲೇ ಉಗ್ರಪೋಷಕ ರಾಷ್ಟ್ರ ಪಾಕಿಸ್ತಾನದ ಪ್ರಧಾನಿ ಹುದ್ದೆಗೇರಿದ ಇಮ್ರಾನ್ ಖಾನ್, ಆಗಾಗ್ಗೆ ತಮ್ಮ ಅಲ್ಪಬುದ್ಧಿಯ ಹೇಳಿಕೆಯಿಂದ ನಗೆಪಾಟಲಿಗೀಡಾಗುತ್ತಿರುತ್ತಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಇಮ್ರಾನ್ ಖಾನ್ ಆಡಿದ ಮಾತು ಸದ್ಯ ನೆಟ್ಟಿಗರ ಪಾಲಿಗೆ ಹಾಸ್ಯದ ವಸ್ತುವಾಗಿದೆ.

ಮರಗಳು ಪ್ರತಿಕ್ಷಣ ಆಮ್ಲಜನಕವನ್ನು ಹೊರಸೂಸುತ್ತವೆ. ಆದರೆ, ಇಮ್ರಾನ್ ಖಾನ್ ಪ್ರಕಾರ ಮರಗಳು ರಾತ್ರಿ ಮಾತ್ರವೇ ಆಮ್ಲಜನಕ ಬಿಡುಗಡೆ ಮಾಡುತ್ತದಂತೆ. ಈ ವಿಡಿಯೋವನ್ನು ಪಾಕ್ ಪತ್ರಕರ್ತೆ ನೈಲಾ ಇನಾಯತ್ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಇಮ್ರಾನ್ ಖಾನ್​ ಭಾಷಣದ ಈ ತುಣುಕನ್ನು ವಿಧ - ವಿಧವಾಗಿ ನೆಟ್ಟಿಗರು ಹಾಸ್ಯ ಮಾಡುತ್ತಿದ್ದಾರೆ. ಇತಿಹಾಸ ಹಾಗೂ ಭೂಗೋಳದ ಬಗ್ಗೆ ತಮ್ಮ ಜ್ಞಾನ ತೋರಿಸಿದ ಇಮ್ರಾನ್ ಸದ್ಯ ಪರಿಸರ ವಿಜ್ಞಾನದ ಬಗ್ಗೆ ಮಾತನಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇನ್ನೊಂದೆಡೆ ಇಂತಹ ಮಾತುಗಳನ್ನಾಡಿದ ಪಾಕ್ ಪ್ರಧಾನಿಗೆ ನೋಬೆಲ್ ನೀಡಿ ಎಂದೂ ಹಾಸ್ಯ ಮಾಡಿದ್ದಾರೆ.

ABOUT THE AUTHOR

...view details