ಕರ್ನಾಟಕ

karnataka

ETV Bharat / international

ಇರಾನ್ ಸರ್ವೋಚ್ಚ ನಾಯಕ ಖಮೇನಿಯ ಸಲಹೆಗಾರನಲ್ಲಿ ಕೊರೊನಾ ಲಕ್ಷಣ! - ಅಲೀ ಅಕ್ಬರ್ ವೇಲಾಯತಿ

ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ವಿದೇಶಿ ವ್ಯವಹಾರಗಳ ಪ್ರಮುಖ ಸಲಹೆಗಾರ ಅಲಿ ಅಕ್ಬರ್ ವೇಲಾಯತಿಯಲ್ಲಿ ಕೋವಿಡ್-19 ಲಕ್ಷಣಗಳು ಕಂಡು ಬಂದಿದ್ದು, ಅವರನ್ನು ಮನೆಯಲ್ಲೇ ನಿಗಾದಲ್ಲಿ ಇರಿಸಲಾಗಿದೆ.

Iran Coronavirus case
ಖಮೇನಿಯ ಸಲಹೆಗಾರ

By

Published : Mar 13, 2020, 1:26 PM IST

ಟೆಹ್ರಾನ್:ಕೊರೊನಾ ವೈರಸ್​​ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಪ್ರಮುಖ ಸಲಹೆಗಾರನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.

ಅಲಿ ಅಕ್ಬರ್ ವೇಲಾಯತಿ ಕೊರೊನಾ ಲಕ್ಷಣ ಕಂಡುಬಂದ ಸಲಹೆಗಾರ. ವೇಲಾಯತಿ ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ವಿದೇಶಿ ವ್ಯವಹಾರಗಳ ಪ್ರಮುಖ ಸಲಹೆಗಾರನಾಗಿದ್ದಾನೆ.

74 ವರ್ಷದ ವೇಲಾಯತಿಗೆ ಬುಧವಾರ ಮಧ್ಯಾಹ್ನದ ವೇಳೆ ಕೊರೊನಾ ಲಕ್ಷಣಗಳು ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಅವರನ್ನು ಮನೆಗೆ ಕರೆದುಕೊಂಡು ಹೋಗಿ ನಿಗಾ ಇರಿಸಲಾಗಿದೆ. ಅಲಿ ಅಕ್ಬರ್ ವೇಲಾಯತಿಗೆ ಸೋಂಕು ತಗುಲಿರುವ ಬಗ್ಗೆ ಇದುವರೆಗೂ ದೃಢಪಟ್ಟಿಲ್ಲ.

ABOUT THE AUTHOR

...view details