ಕಾಬೂಲ್ (ಅಫ್ಘಾನಿಸ್ತಾನ):ಕಾಬೂಲ್‌ನಲ್ಲಿ ವರದಿ ಮಾಡುತ್ತಿದ್ದಾಗ ತಾಲಿಬಾನ್ ಉಗ್ರರು ನನ್ನನ್ನು ಥಳಿಸಿದ್ದು ಕ್ಯಾಮೆರಾ, ತಾಂತ್ರಿಕ ಉಪಕರಣಗಳು ಹಾಗು ಮೊಬೈಲ್ ಕಿತ್ತುಕೊಂಡಿರುವುದಾಗಿ ಟೊಲೊ ನ್ಯೂಸ್ ವರದಿಗಾರ ಜಿಯಾರ್ ಖಾನ್ ಯಾದ್ ತಿಳಿಸಿದ್ದಾರೆ.
ವರದಿಗಾರನ ಥಳಿಸಿ ಕ್ಯಾಮರಾ, ತಾಂತ್ರಿಕ ಉಪಕರಣ, ಮೊಬೈಲ್ ಕಿತ್ತುಕೊಂಡ ತಾಲಿಬಾನ್ ಉಗ್ರರು - Taliban in Kabul
ಕಾಬೂಲ್‌ನ ಹೊಸ ನಗರದಲ್ಲಿ ವರದಿ ಮಾಡುತ್ತಿದ್ದ ವೇಳೆ ಆಗಮಿಸಿದ ತಾಲಿಬಾನ್ ಉಗ್ರರು ಟೊಲೊ ನ್ಯೂಸ್ ವರದಿಗಾರನ ಮೇಲೆ ಹಲ್ಲೆ ನಡೆಸಿ ಉಪಕರಣಗಳನ್ನು ಕಿತ್ತುಕೊಂಡಿದ್ದಾರೆ.
ಶಸ್ತ್ರಸಜ್ಜಿತ ಲ್ಯಾಂಡ್ ಕ್ರೂಸರ್ ವಾಹನದಿಂದ ಇಳಿದು ಗನ್‌ನಿಂದ ಹೊಡೆದರು. ಅವರೇಕೆ ಹಾಗೆ ವರ್ತಿಸಿದರು ಮತ್ತು ಇದ್ದಕ್ಕಿದ್ದಂತೆ ನನ್ನ ಮೇಲೆ ದಾಳಿ ಮಾಡಿದರು ಎಂದು ನನಗಿನ್ನೂ ತಿಳಿದಿಲ್ಲ. ಈ ವಿಚಾರವನ್ನು ತಾಲಿಬಾನ್ ನಾಯಕರೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ ತಪ್ಪಿತಸ್ಥರನ್ನು ಬಂಧಿಸಲಾಗಿಲ್ಲ, ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನೀಡಿದ ಬೆದರಿಕೆ ಎಂದು ಖಾನ್ ಟ್ವೀಟ್ ಮಾಡಿದ್ದಾರೆ.
ಟೊಲೊ ನ್ಯೂಸ್ ಅಫ್ಘಾನಿಸ್ತಾನದ ಮೊದಲ ಸ್ವತಂತ್ರ ಸುದ್ದಿ ವಾಹಿನಿಯಾಗಿದೆ. ಈ ಮೊದಲು ಇದೇ ಮಾಧ್ಯಮ ತನ್ನ ಅಫ್ಘನ್ ವರದಿಗಾರ ಜಿಯಾರ್ ಖಾನ್ನನ್ನು ತಾಲಿಬಾನ್ ಉಗ್ರರು ಹತೈಗೈದಿದ್ದರು ಎಂದು ದೃಢಪಡಿಸಿತ್ತು. ಆದರೆ ಈ ಬಗ್ಗೆ ಸ್ವತಃ ಜಿಯಾರ್ ಖಾನ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.