ಕರ್ನಾಟಕ

karnataka

ETV Bharat / international

ಐಸಿಸ್​ ಅಟ್ಟಹಾಸ: ಕಾಬೂಲ್ ಆತ್ಮಾಹುತಿ ಬಾಂಬ್ ದಾಳಿಗೆ 30 ಮಂದಿ ಬಲಿ

ಕಾಬೂಲ್​​ನ ಶಿಕ್ಷಣ ಕೇಂದ್ರವೊಂದರ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸಂಖ್ಯೆ 30 ಕ್ಕೆ ಏರಿದ್ದು, 70 ಮಂದಿ ಗಾಯಗೊಂಡಿದ್ದಾರೆ. ಇಸ್ಲಾಮಿಕ್​ ಸ್ಟೇಟ್​ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ತಾಲಿಬಾನ್​ ಈ ದಾಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.

Kabul suicide attack rises to 30
ಸಾವಿನ ಸಂಖ್ಯೆ 30ಕ್ಕೆ ಏರಿಕೆ

By

Published : Oct 25, 2020, 11:20 AM IST

ಕಾಬೂಲ್:ಅಫ್ಘಾನಿಸ್ಥಾನದ​ ರಾಜಧಾನಿ ಕಾಬೂಲ್​ನ ಶಿಕ್ಷಣ ಕೇಂದ್ರವೊಂದರ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30 ಜನರು ಬಲಿಯಾಗಿದ್ದು, 70 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ನಿನ್ನೆ ದಾಳಿ ನಡೆದ ವೇಳೆ 18 ಮಂದಿ ಸಾವನ್ನಪ್ಪಿ, 50 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್​​ ಆರೋಗ್ಯ ಇಲಾಖೆ ಸ್ಪುಟ್ನಿಕ್​ ಮಾಹಿತಿ ನೀಡಿತ್ತು. ತೀವ್ರವಾಗಿ ಗಾಯಗೊಂಡಿದ್ದ 37 ಜನರನ್ನು ಕಾಬೂಲ್​ನ ಜಿನ್ಹಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ಪಶ್ಚಿಮ ಕಾಬೂಲ್​ನ ಡ್ಯಾಶ್​-ಎ-ಬಾರ್ಚಿಯಾ ಶಿಯಾ ಶಿಕ್ಷಣ ಕೇಂದ್ರದ ಹೊರಗಡೆ ಆತ್ಮಾಹುತಿ ಬಾಂಬ್​ ದಾಳಿ ನಡೆದಿತ್ತು. ದಾಳಿಕೋರನೊಬ್ಬ ಶಿಕ್ಷಣ ಕೇಂದ್ರ ಒಳಗೆ ಪ್ರವೇಶಿಸಲು ಯತ್ನಿಸಿದ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ತಡೆದಾಗ ಈ ಸ್ಫೋಟ ಸಂಭವಿಸಿತ್ತು.

ಇಸ್ಲಾಮಿಕ್​ ಸ್ಟೇಟ್​ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ತಾಲಿಬಾನ್​ ಈ ದಾಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ABOUT THE AUTHOR

...view details