ಟೋಕಿಯೋ(ಜಪಾನ್): 2011ರ ಬಳಿಕ ಜಪಾನ್ನಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 20ಲಕ್ಷಕ್ಕೂ ಅಧಿಕ ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ. ಇದರ ಬೆನ್ನಲ್ಲೇ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಜಪಾನ್ನಲ್ಲಿ 7.3 ತೀವ್ರತೆ ಭೂಕಂಪ; ವಿದ್ಯುತ್ ಕಳೆದುಕೊಂಡ 20 ಲಕ್ಷ ಮನೆ: ಸುನಾಮಿ ಎಚ್ಚರಿಕೆ - ಜಪಾನ್ನಲ್ಲಿ ಭೂಕಂಪ
ಜಪಾನ್ನಲ್ಲಿ ಮತ್ತೊಮ್ಮೆ ಭಾರಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲಾಗಿದೆ. ಇದರಿಂದ 20 ಲಕ್ಷಕ್ಕೂ ಅಧಿಕ ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ.
Earthquake Of Magnitude in Japan
ಜಪಾನ್ನ ಉತ್ತರ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ಕರಾವಳಿ ಪ್ರದೇಶದಲ್ಲಿರುವ ಫುಕುಶಿಮಾ ಮತ್ತು ಮಿಯಾಮಿ ನಗರದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪನ ಕೇಂದ್ರ ಬಿಂದು ಜಪಾನ್ ರಾಜಧಾನಿ ಟೋಕಿಯೋದಿಂದ 297 ಕಿಲೋ ಮೀಟರ್ ದೂರದಲ್ಲಿದೆ ಎಂದು ತಿಳಿದು ಬಂದಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಈ ಹಿಂದೆ 2011ರಲ್ಲಿ 9.0 ತೀವ್ರತೆ ಭೂಕಂಪ ಸಂಭವಿಸಿದ ಪರಿಣಾಮ ಸುನಾಮಿ ಉಂಟಾಗಿ, ಸಾವಿರಾರು ಜನರು ಸಾವನ್ನಪ್ಪಿದ್ದರು.