ಕರ್ನಾಟಕ

karnataka

ETV Bharat / international

ಅನ್ನಪೂರ್ಣ ಶಿಖರ ಏರಿದ ರಷ್ಯಾದ ಮೂವರು ಪರ್ವತಾರೋಹಿಗಳು ನಾಪತ್ತೆ - ಪರ್ವತಾರೋಹಿಗಳು

ಪ್ರಪಂಚದ 10ನೇ ಅತೀ ಎತ್ತರದ ಅನ್ನಪೂರ್ಣ ಶಿಖರವನ್ನೇರಿದ ರಷ್ಯಾದ ಮೂವರು ಪರ್ವತಾರೋಹಿಗಳು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

Three Russian climbers are reportedly missing from Annapurna I
ಅನ್ನಪೂರ್ಣ ಶಿಖರ ಏರಿದ ರಷ್ಯಾದ ಮೂವರು ಪರ್ವತಾರೋಹಿಗಳು ನಾಪತ್ತೆ

By

Published : Apr 19, 2021, 6:40 AM IST

ಕಠ್ಮಂಡು: ನೇಪಾಳದ ಅನ್ನಪೂರ್ಣ - I ಶಿಖರವನ್ನೇರಿದ ರಷ್ಯಾ ಮೂಲದ ಮೂವರು ಪರ್ವತಾರೋಹಿಗಳು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಸೆರ್ಗೆಯ್​​ ಕೊಂಡ್ರಾಶ್ಕಿನ್, ಲೆಕ್ಸಾಂಡರ್ ಲುಥೋಕಿನ್ ಮತ್ತು ಡಿಮಿಟ್ರಿ ಸಿನೆವ್ - ನಾಪತ್ತೆಯಾದ ಪರ್ವತಾರೋಹಿಗಳು. ಇಂದು ಬೆಳಗ್ಗೆಯಿಂದ ಇವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದ ಹಿಮಾಲಯ ಪ್ರದೇಶದಲ್ಲಿರುವ 8,091 ಮೀಟರ್​ ಎತ್ತರದ ಅನ್ನಪೂರ್ಣ ಶಿಖರವು ಪ್ರಪಂಚದ 10ನೇ ಅತೀ ಎತ್ತರದ ಶಿಖರವಾಗಿದೆ.

ABOUT THE AUTHOR

...view details