ಕರ್ನಾಟಕ

karnataka

ETV Bharat / international

ಕಾಬೂಲ್​ನಲ್ಲಿ ರಾಕೆಟ್​​ ದಾಳಿ: ಮೂವರ ಸಾವು,11 ಮಂದಿಗೆ ಗಾಯ - ಕಾಬೂಲ್​ನಲ್ಲಿ ರಾಕೆಟ್​ ದಾಳಿ

ಅಫಘಾನಿಸ್ತಾನ ರಾಜಧಾನಿ ಕಾಬೂಲ್​​ನ ವಿವಿಧ ಪ್ರದೇಶಗಳ ಮೇಲೆ 14 ರಾಕೆಟ್​ಗಳು ದಾಳಿ ನಡೆಸಿದ್ದು, 3 ಜನ ಸಾವನ್ನಪ್ಪಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Three people were killed in rockets fire
ಕಾಬೂಲ್​ನಲ್ಲಿ ರಾಕೆಟ್​​ ದಾಳಿ

By

Published : Nov 21, 2020, 12:10 PM IST

ಕಾಬೂಲ್​​​:ಇಂದು ಬೆಳಗ್ಗೆ ಕಾಬೂಲ್‌ನ ವಿವಿಧ ಭಾಗಗಳಲ್ಲಿ 14 ರಾಕೆಟ್‌ಗಳು ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಚೆಹೆಲ್ ಸುತೂನ್ ಮತ್ತು ಅರ್ಜಾನ್ ಕ್ವೀಮಾತ್ ಪ್ರದೇಶಗಳಲ್ಲಿ ಎರಡು ಸ್ಫೋಟಗಳು ಸಂಭವಿಸಿದ ಕೆಲವೇ ನಿಮಿಷಗಳಲ್ಲಿ, ಅಫಘಾನಿಸ್ತಾನ ರಾಜಧಾನಿ ಕಾಬೂಲ್​​ನಲ್ಲಿ 14 ರಾಕೆಟ್​​ಗಳು ದಾಳಿ ನಡೆಸಿವೆ ಎಂದು ಅಲ್ಲಿನ ನ್ಯೂಸ್​ ಚಾನೆಲ್​ವೊಂದು ವರದಿ ಮಾಡಿದೆ.

ABOUT THE AUTHOR

...view details