ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭಾನುವಾರ ಬಾಂಬ್ ಸ್ಫೋಟ ಸಂಭವಿಸಿದ್ದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.
ಇಮ್ರಾನ್ ಖಾನ್ ವಿರುದ್ಧ ನಡೆದ ರ್ಯಾಲಿಯಲ್ಲಿ ಬಾಂಬ್ ಸ್ಫೋಟ: ಮೂವರು ಸಾವು - ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ ಮೂವರ ಸಾವು
ನೈರುತ್ಯ ಬಲೂಚಿಸ್ತಾನ್ ಪ್ರಾಂತೀಯ ರಾಜಧಾನಿ ಕ್ವೆಟ್ಟಾದ ಹಜರ್‌ಗಂಜಿ ಪ್ರದೇಶದ ಮಾರುಕಟ್ಟೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷಗಳ ಮೈತ್ರಿಕೂಟವಾದ ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಪಕ್ಷ, ತನ್ನ ಮೂರನೇ ಸರ್ಕಾರಿ ವಿರೋಧಿ ರ್ಯಾಲಿಯನ್ನು ಕ್ವೆಟ್ಟಾದ ಆಯುಬ್ ಮೈದಾನದಲ್ಲಿ ಆಯೋಜಿಸಿತ್ತು.

ಪ್ರಧಾನಿ ಇಮ್ರಾನ್ ಖಾನ್ ಉಚ್ಚಾಟಿಸಲು ಒತ್ತಾಯಿಸುವಾಗ ಈ ಸ್ಫೋಟ ಸಂಭವಿಸಿದೆ. ರ್ಯಾಲಿ ಸ್ಫೋಟದ ಸ್ಥಳದಿಂದ 35 ರಿಂದ 40 ನಿಮಿಷಗಳನ್ನು ಕ್ರಮಿಸುವ ದೂರದಲ್ಲಿದೆ. ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸಭೆಯನ್ನು ಮುಂದೂಡಬೇಕೆಂದು ಬಲೂಚಿಸ್ತಾನ್ ಸರ್ಕಾರ ಪಿಡಿಎಂಗೆ ಮನವಿ ಮಾಡಿತ್ತು.