ಮನಿಲಾ (ಫಿಲಿಪ್ಪಿನ್ಸ್ ): ಫಿಲಿಫಿನ್ಸ್ನ ಮನಿಲಾದಲ್ಲಿ ನಡೆದ ವಾರ್ಷಿಕ ಸ್ತನ್ಯಪಾನ ಕಾರ್ಯಕ್ರಮ 'ಹಕಾಬ್ ನಾ'ದಲ್ಲಿ ಸುಮಾರು 2000ದಷ್ಟು ತಾಯಂದಿರು ಏಕಕಾಲದಲ್ಲಿ ತಮ್ಮ ಶಿಶುಗಳಿಗೆ ಹಾಲುಣಿಸಿದರು.
ಮಕ್ಕಳಿಗೆ ಸ್ತನ್ಯಪಾನ ಮಾಡುವುದರಿಂದ ಉಂಟಾಗುವ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿತ್ತು.
'ಹಕಾಬ್ ನಾ' ಕಾರ್ಯಕ್ರಮದ ಆಯೋಜಕರಾದ ನಾರ್ಮಿ ಅಲ್ವೈರಾ ಹೆರೆರಾ, "ಹಕಾಬ್ ನಾ ಕಾರ್ಯಕ್ರಮವನ್ನು ವರ್ಷಂಪ್ರತಿ ಆಯೋಜಿಸುತ್ತೇವೆ. ಸ್ತನ್ಯಪಾನ ಜಾಗೃತಿ ತಿಂಗಳದ ನಿಮಿತ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಹಾಗಾಗಿ ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಕಾರ್ಯಕ್ರಮ ನಡೆಸುತ್ತೇವೆ" ಎಂದರು.
ಮಕ್ಕಳಿಗೆ ಆರು ತಿಂಗಳಿನ ವರೆಗೆ ಎದೆಹಾಲುಣಿಸುವುದು ಸೂಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಶಿಫಾರಸು ಮಾಡಿದೆ.