ತೈವಾನ್:ಪೋರ್ನ್‌ಹಬ್ ಎಂಬ ಪದವನ್ನು ಕೇಳಿದಾಗಲೇ ನಿಮಗೆ ನೆನಪಿಗೆ ಬರುವುದು ಪೋರ್ನೋಗ್ರಫಿ ಮಾತ್ರ. ಆದರೆ ಗಣಿತದ ಪಾಠಗಳನ್ನು ನೀಡಲು ಪೋರ್ನ್‌ಹಬ್‌ನಂತಹ ವೇದಿಕೆಯನ್ನೂ ಬಳಸಬಹುದು ಎಂದು ಎಂದಾದರೂ ಊಹಿಸಿದ್ದೀರಾ? ಸಾಧ್ಯವಿಲ್ಲ. ಆದ್ರೆ ತೈವಾನ್ ಶಿಕ್ಷಕ ಪೋರ್ನ್‌ಹಬ್ ಮೂಲಕವೇ ಗಣಿತದ ಪಾಠಗಳನ್ನು ಹೇಳಿ ಕೊಡುತ್ತಾ ವರ್ಷಕ್ಕೆ 2 ಕೋಟಿ ಸಂಪಾದಿಸುತ್ತಿದ್ದಾರೆ.
ಹೌದು, ಚಾಂಗ್‌ಶು ಎಂಬ ತೈವಾನ್‌ನ ಗಣಿತ ಶಿಕ್ಷಕ ಅಶ್ಲೀಲ ಸೈಟ್ಗಳಲ್ಲೊಂದಾದ ಪೋರ್ನ್‌ಹಬ್‌ನಲ್ಲಿ ಪಾಠ ಹೇಳಿ ಕೋಟಿ, ಕೋಟಿ ರೊಕ್ಕ ಗಳಿಸುತ್ತಿದ್ದಾರೆ. ಯಾರಾದರೂ ಅಶ್ಲೀಲ ಸೈಟ್ಗಳಲ್ಲಿ ಗಣಿತದ ವಿಡಿಯೊಗಳನ್ನು ವೀಕ್ಷಿಸಲು ಬಯಸುತ್ತಾರಾ? ಎಂಬುದು ಎಲ್ಲರ ಮನದಾಳದ ಪ್ರಶ್ನೆಯಾಗಿರಬಹುದು. ಆದ್ರೆ ಚಾಂಗ್‌ಶು ಅವರ ಗಣಿತ ಶಿಕ್ಷಣದ ವಿಡಿಯೋಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಗಳಿಸುತ್ತಿವೆ. ಅಶ್ಲೀಲ ವೇದಿಕೆಯೆಂಬ ವಿಚಾರ ಲೆಕ್ಕಿಸದೆ ಜನರು ತಮ್ಮ ಗಣಿತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಬಯಸುತ್ತಿದ್ದಾರಂತೆ.
ಚಾಂಗ್‌ಶು ಪೋರ್ನ್‌ಹಬ್‌ನಲ್ಲಿ ಪರಿಶೀಲಿಸಿದ ಖಾತೆ ಹೊಂದಿದ್ದಾರೆ. ಇದಕ್ಕೂ ಮುನ್ನ ಅವರು ಬೇರೆ ಅಶ್ಲೀಲ ಸೈಟ್ಗಳಲ್ಲಿ ಗಣಿತ ಕಲಿಸಲು ಯತ್ನಿಸಿದ್ದರು. ಆದರೆ ಇತರ ಸೈಟ್‌ಗಳು ವಯಸ್ಕರಲ್ಲದ ಕ್ಲಿಪ್‌ಗಳನ್ನು ಅನುಮತಿಸಲಿಲ್ಲ. ಆದ್ರೆ ಈ ಸೈಟ್ ಪಕ್ಷಪಾತ ತೋರದೆ ಗಣಿತ ಕ್ಲಾಸ್ ಹೇಳಲು ಇವರಿಗೆ ಅನುಕೂಲ ಮಾಡಿಕೊಟ್ಟಿತು.