ಕರ್ನಾಟಕ

karnataka

ETV Bharat / international

ವಿಶ್ವದ ಅತಿ ಚಿಕ್ಕ ನದಿ ಇರೋದು ಎಲ್ಲಿ ಗೊತ್ತಾ? ಏನಿದರ ವಿಶೇಷ.. ಅದರ ಪುಟ್ಟ ಪುಟ್ಟ ಹೆಜ್ಜೆಗಳು ಇಲ್ಲಿವೆ! - ವಿಶ್ವದ ಅತಿ ಚಿಕ್ಕ ನದಿ

ಚೀನಾದ ಮಂಗೋಲಿಯಾದಲ್ಲಿ ಹುಲೈ ಹೆಸರಿನ ವಿಶ್ವದ ಅತಿ ಚಿಕ್ಕ ನದಿ ಇದೆ. ಹುಲೈ ನದಿಯು 17 ಕಿ.ಮೀ ಉದ್ದವಿದೆ. ಸರಾಸರಿ ಅಗಲ ಕೇವಲ 15 ಸೆಂ.ಮೀ. ಒಂದೆಡೆ ನದಿಯು ಕೇವಲ 4 ಸೆಂ.ಮೀ ಅಗಲವಿದ್ದು, ಕಿರಿದಾದ ಕಾಲುವೆಯೇನೋ ಎಂದು ಎನಿಸುತ್ತದೆ.

the narrowest river in the world
ವಿಶ್ವದ ಅತಿ ಚಿಕ್ಕ ನದಿ - ಚೀನಾದ ಹುಲೈ ನದಿ

By

Published : Jan 27, 2022, 7:10 AM IST

ಬೀಜಿಂಗ್​( ಚೀನಾ) Worlds narrowest river:ಈ ನದಿಯನ್ನು ನೋಡಿದರೆ ಕಿರಿದಾದ ಕಾಲುವೆಯೇನೋ ಎಂದು ಎನಿಸುತ್ತದೆ. ಕೃಷಿ ಭೂಮಿಗಳಲ್ಲಿ ನೀರು ಹಾಯಿಸಲು ನಿರ್ಮಿಸಿರುವ ಸಣ್ಣ ಕಾಲುವೆ ಅನ್ನಿಸುವುದು ಸಹಜ. ಆದರೆ ಇದು ವಿಶ್ವದ ಅತ್ಯಂತ ಕಿರಿದಾದ/ ಅತಿ ಚಿಕ್ಕ ನದಿಯಾಗಿದೆ.

ವಿಶ್ವದ ಅತಿ ಚಿಕ್ಕ ನದಿ - ಚೀನಾದ ಹುಲೈ ನದಿ

ಹೌದು, ಈ ಕಿರಿದಾದ ನದಿಯ ಹೆಸರು ಹುಲೈ. ಚೀನಾದ ಮಂಗೋಲಿಯಾದಲ್ಲಿರುವ ಈ ನದಿ ಕೆಲವೇ ಸೆಂಟಿಮೀಟರ್​ನಷ್ಟು ಅಗಲವಿದೆ. ಕೆಲವೆಡೆ ಇದನ್ನು ನಾವು ಒಮ್ಮೆಲೆ ದಾಟಬಹುದಾದಷ್ಟು ಚಿಕ್ಕ ನದಿಯಾಗಿದೆ ಎಂಬುದು ಇನ್ನೂ ವಿಶೇಷ.

ತಜ್ಞರು ಏನಂತಾರೆ?ಮಂಗೋಲಿಯನ್ ನಲ್ಲಿರುವ ಹುಲೈ ನದಿಯು 17 ಕಿ.ಮೀ ಉದ್ದವಿದೆ. ಸರಾಸರಿ ಅಗಲ ಕೇವಲ 15 ಸೆಂ.ಮೀ. ಒಂದೆಡೆ ನದಿಯು ಕೇವಲ 4 ಸೆಂ.ಮೀ ನಷ್ಟೇ ಅಗಲವಿದೆ. ಸಣ್ಣ ಕಾಲುವೆಯಂತಹ ನದಿ ಇರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಚೀನಾದ ತಜ್ಞರ ಪ್ರಕಾರ, ಕಳೆದ 10,000 ವರ್ಷಗಳಿಂದ ಈ ನದಿ ಹರಿಯುತ್ತಿದೆಯಂತೆ. ನದಿಯು ಅಂತರ್ಜಲದಿಂದ ಹುಟ್ಟಿ ಹಿಗ್ಗಿನ್ಸ್ ಹುಲ್ಲುಗಾವಲಿನಲ್ಲಿ ಹರಿದು ದಲೈ ಲಾಮಾ ನೂರ್ ಸರೋವರವನ್ನು ಸೇರುವುದು ಇನ್ನೊಂದು ವಿಶೇಷ.

ವಿಶ್ವದ ಅತಿ ಚಿಕ್ಕ ನದಿ - ಚೀನಾದ ಹುಲೈ ನದಿ

ಹುಲೈಯನ್ನು ನದಿ ಎಂದು ಪರಿಗಣಿಸುವ ಬಗ್ಗೆ ಹಲವು ಭಿನ್ನಾಭಿಪ್ರಾಯಗಳಿವೆ. ಆದಾಗ್ಯೂ, ನೀರಿನ ಹರಿವನ್ನು ನದಿಯೆಂದು ಪರಿಗಣಿಸಲು ಅದರ ಗಾತ್ರದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಕೆಲವರು ವಾದಿಸುತ್ತಾರೆ. ಹುಲೈ ನದಿಯ ಎಲ್ಲ ಲಕ್ಷಣಗಳನ್ನು ಹೊಂದಿದೆ. ನದಿ ವರ್ಷವಿಡೀ ಹರಿಯುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಇದನ್ನೂ ಓದಿ:ನಿಮ್ಮ ಕಾರು ಎಲ್ಲಿದೆ ಎಂದು ಗೊತ್ತಾಗುತ್ತಿಲ್ಲವೇ?.. ಪಾರ್ಕಿಂಗ್​ ಜಾಗವನ್ನು ಹೀಗೆ ಹುಡುಕಿ..

Book Bridge River: ಈ ನದಿಯನ್ನು 'ಪುಸ್ತಕ ಸೇತುವೆ ನದಿ'/ಬುಕ್​ ಬ್ರಿಡ್ಜ್​​ ರಿವರ್​ ಎಂತಲೂ ಕರೆಯುತ್ತಾರೆ. ಈ ಹೆಸರು ಚೀನೀ ಜಾನಪದದಿಂದ ಬಂದಿದೆ. ಕಥೆಗಳ ಪ್ರಕಾರ, ಒಬ್ಬ ಹುಡುಗ ನದಿಯನ್ನು ದಾಟುವಾಗ ತನ್ನ ಪುಸ್ತಕವನ್ನು ಬೀಳಿಸಿದನು. ಅದು ಈ ನದಿಯ ಮೇಲೆ ಸೇತುವೆಯಂತೆ ಬಿದ್ದಿತು. ಇರುವೆಗಳು ಮತ್ತು ಇತರ ಸಣ್ಣ ಜೀವಿಗಳು ಪುಸ್ತಕದ ಮೇಲಿನಿಂದ ನದಿಯನ್ನು ದಾಟಿದವು. ಅಂದಿನಿಂದ ಈ ನದಿಗೆ Book Bridge River ಎಂದೂ ಸಹ ಕರೆಯುತ್ತಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details