ತಾಷ್ಕೆಂಟ್(ಉಜ್ಬೇಕಿಸ್ತಾನ್): 2023ರಲ್ಲಿ ನಡೆಯಲಿರುವ ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್ ಆತಿಥ್ಯವನ್ನು ಉಜ್ಬೇಕಿಸ್ತಾನ್ ವಹಿಸಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಎಐಬಿಎ) ಶುಕ್ರವಾರ ತಿಳಿಸಿದೆ.
2023ರ ಚಾಂಪಿಯನ್‌ಶಿಪ್‌ನ ಆತಿಥೇಯ ರಾಷ್ಟ್ರವಾಗಿ ಅತ್ಯುತ್ತಮ ಬಾಕ್ಸರ್‌ಗಳನ್ನು ಹೊಂದಿರುವ ಉಜ್ಬೇಕಿಸ್ತಾನ್ ಅನ್ನು ಘೋಷಿಸಲು ನನಗೆ ಸಂತೋಷವಾಗಿದೆ. ಅಪಾರ ಅಭಿಮಾನಿಗಳ ಬೆಂಬಲ ಮತ್ತು ಅದ್ಭುತ ಪಂದ್ಯಗಳು ನಡೆಯಲಿವೆ ಎಂದು ಎಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೆವ್ ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಸ್ತೆಯಲ್ಲಿ ಹೋಗ್ತಿದ್ದ ಪುಟ್ಟ ಬಾಲಕಿ ಮೇಲೆರಗಿದ ಬೀದಿ ನಾಯಿ!
ಉಜ್ಬೇಕಿಸ್ತಾನ್ ರಾಷ್ಟ್ರ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್‌ನ ಸಕ್ರಿಯ ಸದಸ್ಯ ರಾಷ್ಟ್ರವಾಗಿದ್ದು, ನಮ್ಮಲ್ಲಿ ಶ್ರೀಮಂತ ಬಾಕ್ಸಿಂಗ್ ಇತಿಹಾಸವಿದೆ. ನಮ್ಮ ಕ್ರೀಡಾಪಟುಗಳು ಮತ್ತು ಅವರ ಗೆಲುವುಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಉಜ್ಬೇಕಿಸ್ತಾನ್ ಅಧ್ಯಕ್ಷ ರುಸ್ತಮ್ ಶಾಬ್ದುರಖ್ಮೋನೊವ್ ಹೇಳಿದ್ದಾರೆ.
ಇದರ ಜೊತೆಗೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಸಹಕಾರದೊಂದಿಗೆ ನಮ್ಮ ದೇಶದಲ್ಲಿ ಬಾಕ್ಸಿಂಗ್ ಅನ್ನು ಜನಪ್ರಿಯಗೊಳಿಸುತ್ತೇವೆ ಎಂದು ರುಸ್ತಮ್ ಶಾಬ್ದುರಖ್ಮೋನೊವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.