ಕಾಬೂಲ್(ಅಫ್ಘಾನಿಸ್ತಾನ):ನಮ್ಮ ವಿಮಾನಗಳನ್ನು ನಮಗೆ ಕೊಟ್ಟುಬಿಡಿ ಅಥವಾ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ ಎಂದು ಉಜ್ಭೇಕಿಸ್ತಾನ ಮತ್ತು ತಜಿಕಿಸ್ತಾನಕ್ಕೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಕಠಿಣ ಎಚ್ಚರಿಕೆ ನೀಡಿದೆ.
ಕಾಬೂಲ್‌ನಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಾಯುಪಡೆಯು ಸಮರಾಭ್ಯಾಸ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಹಂಗಾಮಿ ರಕ್ಷಣಾ ಸಚಿವ ಮುಜಾಹಿದ್, ತಜಿಕಿಸ್ತಾನ್ ಅಥವಾ ಉಜ್ಬೇಕಿಸ್ತಾನಕ್ಕೆ ಕೊಂಡೊಯ್ಯಲಾದ ಮಿಲಿಟರಿ ವಿಮಾನಗಳನ್ನು ಕೂಡಲೇ ಹಿಂತಿರುಗಿಸಬೇಕು, ಇಲ್ಲವಾದಲ್ಲಿ ಆ ರಾಷ್ಟ್ರಗಳು ಪರಿಣಾಮ ಎದುರಿಸಲು ಸಜ್ಜಾಗಬೇಕು ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.
ಅಫ್ಘಾನಿಸ್ತಾನದ ಪ್ರಜಾಪ್ರಭುತ್ವ ಸರ್ಕಾರ ಉರುಳಿದ ನಂತರ ಕೆಲವು ಮಿಲಿಟರಿ ವಿಮಾನಗಳನ್ನು ತಜಿಕಿಸ್ತಾನ ಮತ್ತು ಉಜ್ಭೇಕಿಸ್ತಾನಕ್ಕೆ ಕೊಂಡೊಯ್ಯಲಾಗಿತ್ತು. ಆ ವಿಮಾನಗಳನ್ನು ಆ ದೇಶಗಳಲ್ಲೇ ಉಳಿಯಲು ಅಥವಾ ಆ ದೇಶಗಳು ಬಳಸಲು ನಾವು ಅನುಮತಿ ನೀಡುವುದಿಲ್ಲ. ನಮ್ಮ ಭವಿಷ್ಯದ ವಾಯುಪಡೆ ಯಾವುದೇ ದೇಶವನ್ನು ಅವಲಂಬಿಸಿರುವುದಿಲ್ಲ ಎಂದು ರಕ್ಷಣಾ ಸಚಿವ ಮುಜಾಹಿದ್ ಹೇಳಿಕೆ ನೀಡಿದ್ದಾರೆ.