ಕರ್ನಾಟಕ

karnataka

ETV Bharat / international

ದೂತವಾಸಗಳು, ರಾಜತಾಂತ್ರಿಕರು, ವಿದೇಶಿಗರಿಗೆ ರಕ್ಷಣೆಯ ಭರವಸೆ ನೀಡಿದ ತಾಲಿಬಾನ್‌ - ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್

ಅಫ್ಘಾನಿಸ್ತಾನದಲ್ಲಿರುವ ರಾಜತಾಂತ್ರಿಕ ಕಚೇರಿಗಳು, ಸಿಬ್ಬಂದಿ, ದತ್ತಿ ಸಂಸ್ಥೆಗಳ ವಿದೇಶಿ ಕಾರ್ಯಕರ್ತರಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ತಾಲಿಬಾನ್‌ ವಕ್ತಾರ ಭರವಸೆ ನೀಡಿದ್ದಾರೆ.

Taliban tries to assure the world that it is business as normal after Kabul takeover
ಅಫ್ಘಾನ್‌ನಲ್ಲಿ ಎಂದಿನಂತೆ ವ್ಯಾಪಾರ, ವಹಿವಾಟು; ವಿದೇಶಿಗರಿಗೆ ರಕ್ಷಣೆಯ ಭರವಸೆ ನೀಡಿದ ತಾಲಿಬಾನ್‌

By

Published : Aug 17, 2021, 1:32 PM IST

ಕಾಬೂಲ್(ಅಫ್ಘಾನಿಸ್ತಾನ): ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿರುವ ತಾಲಿಬಾನ್, ದೇಶದಲ್ಲಿನ ವಿದೇಶಿ ಕಾರ್ಯಕರ್ತರು ಹಾಗೂ ದತ್ತಿ ಸಂಸ್ಥೆಗಳ ಕಾರ್ಯಕರ್ತರಿಗೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿದೆ.

ಎಲ್ಲಾ ರಾಜತಾಂತ್ರಿಕರು, ರಾಯಭಾರ ಕಚೇರಿಗಳು, ದೂತವಾಸಗಳು ಮತ್ತು ದತ್ತಿ ಸೇವೆಯಲ್ಲಿರುವವರಿಗೆ ನಾವು ರಕ್ಷಣೆಯ ಭರವಸೆ ನೀಡುತ್ತೇವೆ. ದೇಶ, ವಿದೇಶದವರಿಗೆ ತಾಲಿಬಾನ್‌ ಕಡೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಎಲ್ಲ ರೀತಿಯ ಸುರಕ್ಷತೆಯ ವಾತಾವರಣವನ್ನು ಒದಗಿಸಲಾಗುವುದು ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ನಾಗರಿಕರು ಮತ್ತು ರಾಜತಾಂತ್ರಿಕ ಸಿಬ್ಬಂದಿಯನ್ನು ಅಫ್ಘಾನ್‌ನ ವಿವಿಧ ಭಾಗಗಳಿಂದ ಸ್ಥಳಾಂತರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ತಾಲಿಬಾನ್‌ ಈ ಭರವಸೆ ಕೊಟ್ಟಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಅಫ್ಘಾನ್‌ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ನಿನ್ನೆ ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ತಾಲಿಬಾನ್‌ ಬೆಂಬಲಿತ ಚಟುವಟಿಕೆಗಳಿಗೆ ನಿಷೇಧ

ABOUT THE AUTHOR

...view details