ಕರ್ನಾಟಕ

karnataka

ETV Bharat / international

ಜನರು ದೇಶ ತೊರೆಯುವುದನ್ನು ನಿಲ್ಲಿಸಲು ಪ್ಲ್ಯಾನ್ : ಶೀಘ್ರವೇ ತಾಲಿಬಾನ್ ಸರ್ಕಾರ ರಚಿಸುವುದಾಗಿ ಘೋಷಣೆ - ತಾಲಿಬಾನ್ ಸರ್ಕಾರ

ಆಗಸ್ಟ್ 15ರಂದು ಕಾಬೂಲ್​ ಅನ್ನು ತಾಲಿಬಾನ್​ ವಶಕ್ಕೆ ಪಡೆದು, ತನ್ನ ಅಧಿಪತ್ಯ ಸ್ಥಾಪಿಸಿದೆ. ತಾಲಿಬಾನ್​ಗೆ ಹೆದರಿ ಅಲ್ಲಿನ ಜನರು ದೇಶ ತೊರೆಯುತ್ತಿದ್ದಾರೆ. ಜನತೆ ಸ್ಥಳಾಂತರಗೊಳ್ಳುವುದನ್ನು ತಡೆಯಲು ತಾಲಿಬಾನ್ ಸರ್ಕಾರ ರಚನೆಗೆ ಮುಂದಾಗಿದೆ..

ಶೀಘ್ರ ತಾಲಿಬಾನ್ ಸರ್ಕಾರ
ಶೀಘ್ರ ತಾಲಿಬಾನ್ ಸರ್ಕಾರ

By

Published : Aug 22, 2021, 10:37 PM IST

Updated : Aug 22, 2021, 10:50 PM IST

ಕಾಬೂಲ್(ಅಫ್ಘಾನಿಸ್ತಾನ) :ಅಫ್ಘನಿಸ್ತಾನವನ್ನ ವಶಪಡಿಸಿಕೊಂಡ ಒಂದು ವಾರದ ಬಳಿಕ ಶೀಘ್ರದಲ್ಲೇ ತಾಲಿಬಾನ್ ಹೊಸ ಸರ್ಕಾರ ರಚಿಸುವುದಾಗಿ ಘೋಷಿಸಿದೆ. ದೇಶ ತೊರೆಯುತ್ತಿರುವ ಜನರನ್ನು ಉಳಿಸಿಕೊಳ್ಳುವ ಭಾಗವಾಗಿ ಉಗ್ರಪಡೆ ಈ ನಿರ್ಧಾರ ಕೈಗೊಂಡಿದೆ.

ತಾಲಿಬಾನ್ ವಕ್ತಾರ ಜಬಿಉಲ್ಲಾ ಮುಜಾಹಿದ್, ಅಫ್ಘನ್​ ರಾಜಕೀಯ ನಾಯಕರೊಂದಿಗೆ ಹೊಸ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸುತ್ತಿದ್ದು, ಸದ್ಯದಲ್ಲಿಯೇ ಹೊಸ ಸರ್ಕಾರ ಘೋಷಿಸಲಾಗುವುದು ಎಂದು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ನಮ್ಮ ರಾಜಕೀಯ ಅಧಿಕಾರಿಗಳು, ಕಾಬೂಲ್​ನ ರಾಜಕೀಯ ನಾಯಕರನ್ನು ಭೇಟಿಯಾಗಿದ್ದಾರೆ. ನಮಗೆ ಸರ್ಕಾರ ರಚಿಸಲು ಅವರ ಅಭಿಪ್ರಾಯಗಳು ಮುಖ್ಯ. ಶೀಘ್ರದಲ್ಲೇ ಸರ್ಕಾರ ರಚನೆ ಕುರಿತು ಘೋಷಿಸುತ್ತೇವೆ ಎಂದು ತಾಲಿಬಾನ್ ವಕ್ತಾರ ಜಬಿಉಲ್ಲಾ ಮುಜಾಹಿದ್ ಹೇಳಿದ್ದಾರೆ.

ಇದನ್ನೂ ಓದಿ: ಕಾಬೂಲ್ ಏರ್​ಪೋರ್ಟ್​ಗೆ ತೆರಳುತ್ತಿದ್ದ ಅಮೆರಿಕ ಪ್ರಜೆಗಳನ್ನು ಥಳಿಸಿದ ತಾಲಿಬಾನ್​..

ಶನಿವಾರ, ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬೂಲ್​ಗೆ ಆಗಮಿಸಿ, ಅಫ್ಘನ್​ ರಾಜಕೀಯ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್ ಮತ್ತು ರಾಷ್ಟ್ರೀಯ ಸಮನ್ವಯದ ಉನ್ನತ ಮಂಡಳಿ (ಹೆಚ್‌ಸಿಎನ್‌ಆರ್) ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಜತೆ ತಾಲಿಬಾನ್ ಚರ್ಚೆ ನಡೆಸಿದೆ.

ಈ ಕುರಿತು ಅಬ್ದುಲ್ಲಾ ಅಬ್ದುಲ್ಲಾ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದು, ತಾಲಿಬಾನ್ ನಾಯಕರು ನಮ್ಮನ್ನು ಭೇಟಿಯಾಗಿದ್ದು, ಸರ್ಕಾರ ರಚನೆ ಸಂಬಂಧ ಚರ್ಚಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಅಫ್ಘನ್​ ಬಿಕ್ಕಟ್ಟು : ನಾಳೆ ಜಿ-7 ರಾಷ್ಟ್ರಗಳ ತುರ್ತು ಸಭೆ ಕರೆದ ಜಾನ್ಸನ್​ ಬೋರಿಸ್

ಆಗಸ್ಟ್ 15ರಂದು ಕಾಬೂಲ್​ ಅನ್ನು ತಾಲಿಬಾನ್​ ವಶಕ್ಕೆ ಪಡೆದು, ತನ್ನ ಅಧಿಪತ್ಯ ಸ್ಥಾಪಿಸಿದೆ. ತಾಲಿಬಾನ್​ಗೆ ಹೆದರಿ ಅಲ್ಲಿನ ಜನರು ದೇಶ ತೊರೆಯುತ್ತಿದ್ದಾರೆ. ಜನತೆ ಸ್ಥಳಾಂತರಗೊಳ್ಳುವುದನ್ನು ತಡೆಯಲು ತಾಲಿಬಾನ್ ಸರ್ಕಾರ ರಚನೆಗೆ ಮುಂದಾಗಿದೆ..

Last Updated : Aug 22, 2021, 10:50 PM IST

ABOUT THE AUTHOR

...view details