ಕಾಬೂಲ್(ಅಫ್ಘಾನಿಸ್ತಾನ): ದೇಶವನ್ನು ತಾಲಿಬಾನ್ ತೆಕ್ಕೆಗೆ ತೆಗೆದುಕೊಂಡ ನಂತರ ಕಾಬೂಲ್ನಲ್ಲಿದ್ದ ಎಲ್ಲಾ ಸರ್ಕಾರಿ ಸಂಸ್ಥೆ, ಮಿಲಿಟರಿಗಳನ್ನು ವಶಪಡಿಸಿಕೊಂಡಿದೆ. ಲಕ್ಷಾಂತರ ಅಫ್ಘಾನಿಗಳು ದೇಶ ತೊರೆಯಲು ಪ್ರಯತ್ನಿಸುತ್ತಿದ್ದು, ತಾಲಿಬಾನಿಗಳು ಗಸ್ತು ತಿರುಗುತ್ತಿದ್ದಾರೆ.
ಮಿಲಿಟರಿ, ಸರ್ಕಾರಿ ಸಂಸ್ಥೆಗಳನ್ನು ವಶಕ್ಕೆ ಪಡೆದುಕೊಂಡ ತಾಲಿಬಾನ್ ಉಗ್ರರು - ಮಿಲಿಟರಿ, ಸರ್ಕಾರಿ ಸಂಸ್ಥೆಗಳನ್ನು ವಶಕ್ಕೆ ಪಡೆದುಕೊಂಡ ತಾಲಿಬಾನ್
ಅಫ್ಘಾನಿಸ್ತಾನದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಜನತೆ ಭೀತಿಗೊಳಗಾಗಿದ್ದು, ದೇಶ ತೊರೆಯಲು ಯತ್ನಿಸುತ್ತಿದ್ದಾರೆ.
Taliban
ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಉಗ್ರರು ರಾಜಧಾನಿ ಸುತ್ತಲೂ ಗಸ್ತು ತಿರುಗುತ್ತಿದ್ದಾರೆ. ಸರ್ಕಾರದ ಸಚಿವಾಲಯಗಳು, ಅಧ್ಯಕ್ಷರ ಮನೆಯಲ್ಲಿ ಉಗ್ರರು ಬೀಡು ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಾಲಿಬಾನ್, ಕಾಬೂಲ್ನನ್ನು ವಶಕ್ಕೆ ಪಡೆದುಕೊಂಡ ನಂತರ ಅಧ್ಯಕ್ಷ ಅಶ್ರಫ್ ಘನಿ ಸರ್ಕಾರ ತ್ಯಜಿಸಿ ಪರಾರಿಯಾಗಿದ್ದಾರೆ. ದೇಶದಲ್ಲಿ ಬೀಡುಬಿಟ್ಟಿದ್ದ ಅಮೆರಿಕ ಸೇನೆ ಭಾನುವಾರ ಹಿಂತೆಗೆದುಕೊಂಡಿದೆ.
Last Updated : Aug 16, 2021, 7:45 PM IST