ಕಾಬೂಲ್: ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಅಂತ್ಯಗೊಳಿಸಿ ಇಡೀ ದೇಶವನ್ನು ಆಕ್ರಮಿಸಿಕೊಂಡಿರುವ ತಾಲಿಬಾನಿಗಳು ಅಲ್ಲಿನ ಶಸ್ತ್ರಾಸ್ತ್ರಗಳನ್ನು ಕೈವಶ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಪತನಗೊಳ್ಳುತ್ತಿದ್ದಂತೆ ತಮ್ಮ ಬಳಿ ಇರುವ ಎಕೆ-47ಗಿಂತ ಯುಎಸ್‌ಗೆ ಸೇರಿದ ಗನ್‌ಗಳು ಅತಿ ಹೆಚ್ಚು ನಿಖರವಾಗಿರುವುದನ್ನು ಅರಿತಿರುವ ಉಗ್ರರು ಸರ್ಕಾರದ ಬತ್ತಳಿಕೆಯಲ್ಲಿದ್ದ ಯುಎಸ್‌ನ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.
ತಾಲಿಬಾನ್ ಉಗ್ರರಿಗೆ ಎಕೆ-47ಗಿಂತ ಅಮೆರಿಕದ ರೈಫಲ್‌ಗಳ ಮೇಲೆಯೇ ಹೆಚ್ಚು ಪ್ರೀತಿ - ರೈಫಲ್
ಉಗ್ರ ಸಂಘಟನೆ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ನಂತರ ಇದೀಗ ಅಲ್ಲಿನ ಸೇನೆ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ವಿಡಿಯೋ ಹಾಗೂ ಚಿತ್ರಗಳಲ್ಲಿ ಉಗ್ರರು ಅಫ್ಘಾನ್ ಸರ್ಕಾರದ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸಿರುವುದನ್ನು ಕಾಣಬಹುದು. ತಮ್ಮ ಬಳಿ ಇರುವ ಎಕೆ-47ಗಿಂತ ಅಮೆರಿಕದ ರೈಫಲ್‌ಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ.
ತಾಲಿಬಾನ್‌ಗಳಿಗೆ ಎಕೆ-47ಗಿಂತ ಅಮೆರಿಕದ ರೈಫಲ್‌ಗಳ ಮೇಲೆಯೇ ಹೆಚ್ಚು ಪ್ರೀತಿ..!
ತಾಲಿಬಾನ್‌ಗಳು ಟ್ವಿಟರ್ ಮತ್ತು ಇತರೆಡೆಗಳಲ್ಲಿ ಪ್ರಕಟಿಸಿದ ವೀಡಿಯೋ ಮತ್ತು ಚಿತ್ರಗಳು ಅಫ್ಘಾನ್ ಸೇನಾ ಘಟಕಗಳು ಬಿಟ್ಟು ಹೋಗಿರುವ M4 ಕಾರ್ಬೈನ್‌ಗಳು ಮತ್ತು M16 ರೈಫಲ್‌ಗಳನ್ನು ಹೊತ್ತ ಹೋರಾಟಗಾರರು ಅವುಗಳನ್ನು ಪ್ರದರ್ಶಿಸುತ್ತಿದ್ದಾರೆ. ಜೊತೆಗೆ ಸರ್ಕಾರಿ ವಾಹನಗಳನ್ನು ತಾಲಿಬಾನ್ ಪಡೆಗಳು ಸೆರೆಹಿಡಿಯುವುದನ್ನು ಈ ಚಿತ್ರಗಳಲ್ಲಿ ಕಾಣಬಹುದು.
ಇದನ್ನೂ ಓದಿ: 'ತಾಲಿಬಾನಿಗಳು ಯಾವಾಗ ಮನೆ ಬಾಗಿಲು ಬಡೀತಾರೋ ಎಂಬ ಭಯದಲ್ಲೇ ನಮ್ಮ ಬದುಕು': ಕಾಬೂಲ್ ಮಹಿಳಾಧಿಕಾರಿಯ ವೇದನೆ
Last Updated : Aug 18, 2021, 8:28 AM IST