ಕಾಬೂಲ್: ಶಾಂತಿ ಮಾತುಕತೆಗೆ ಮುಂಚಿತವಾಗಿ 1,500 ಕೈದಿಗಳನ್ನು ಬಿಡುಗಡೆ ಮಾಡುವ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ನೀಡಿದ ಪ್ರಸ್ತಾಪವನ್ನು ತಾಲಿಬಾನ್ ತಿರಸ್ಕರಿಸಿದೆ.
ಕಳೆದು ತಿಂಗಳು ನಡೆದಿದ್ದ ತಾಲಿಬಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮದ ಶಾಂತಿ ಒಪ್ಪಂದದ ಭಾಗವಾದ ತಾಲಿಬಾನ್ ಕೈದಿಗಳ ಬಿಡುಗಡೆಗೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಸಹಿ ಹಾಕಿದ್ದರು. ಹೀಗಾಗಿ ಶಾಂತಿ ಮಾತುಕತೆಗೂ ಮೊದಲು ತಾಲಿಬಾನ್ನ 1,500 ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಅಫ್ಘನ್ ಹೇಳಿದೆ.