ಕಾಬೂಲ್(ಅಫ್ಘಾನಿಸ್ತಾನ):ತಾಲಿಬಾನ್ ಆಟಾಟೋಪ ದಿನದಿಂದ ತೀವ್ರ ಸ್ವರೂಪ ಪಡೆಯುತ್ತಿದೆ. ತಾಲಿಬಾನ್ ಮುಖಂಡರಲ್ಲೊಬ್ಬನಾದ ಅನಸ್ ಹಕ್ಕಾನಿ ಎಂಬಾತ ಟ್ವೀಟ್ ಮಾಡಿ, ಐತಿಹಾಸಿಕ ಸೋಮನಾಥ ದೇವಾಲಯದ ವಿಗ್ರಹವನ್ನು ನಾಶಪಡಿಸಿರುವುದಾಗಿ ಹೇಳಿಕೊಂಡಿದ್ದಾನೆ.
'10ನೇ ಶತಮಾನದ ಮುಸ್ಲಿಂ ನಾಯಕ ಮಹಮ್ಮದ್ ಘಜ್ನವಿ ಅವರ ಪ್ರದೇಶಕ್ಕೆ ನಾವು ಇಂದು ಭೇಟಿ ನೀಡಿದ್ದೆವು. ಅಲ್ಲಿದ್ದ ಐತಿಹಾಸಿಕ ಸೋಮನಾಥ ದೇವಾಲಯದ ಸೋಮನಾಥ ವಿಗ್ರಹವನ್ನು ನಾಶ ಮಾಡಿದ್ದೇವೆ' ಎಂದು ಟ್ವೀಟ್ನಲ್ಲಿ ತಿಳಿಸಿದ್ದಾನೆ.