ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ನೂರಾರು ಮಂದಿ ನಾಗಕರು ಪ್ರಾಣ ಕಳೆದುಕೊಂಡಿದ್ದಾರೆ. ಉಗ್ರ ಸಂಘಟನೆಯ ವಿರುದ್ಧ ವಿಶ್ವದ ಏಜೆನ್ಸಿಗಳು ಸಮರ ಸಾರಿದ್ದು, ಆರ್ಥಿಕ ನೆರವನ್ನು ಸಂಪೂರ್ಣವಾಗಿ ಬಂದ್ ಮಾಡಿವೆ. ಇದರ ಬೆನ್ನಲ್ಲೇ ತಾಲಿಬಾನ್‌ಗಳು ನೆರೆದೇಶಗಳ ಜೊತೆ ಸಂಪರ್ಕಕ್ಕೆ ಪ್ರಯತ್ನಿಸುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ನಾಯಕ ಶೇರ್ ಮೊಹಮ್ಮದ್ ಸ್ಟಾನೆಕ್‌ಜಾಯ್, ಭಾರತ ಉಪಖಂಡಕ್ಕೆ ಬಹಳ ಮಹತ್ವದ್ದಾಗಿದೆ. ನೆರೆಯ ಭಾರತದ ಜೊತೆಗೆ ಅಫ್ಘಾನಿಸ್ತಾನದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧ ಮುಂದುವರಿಸಲು ತಾಲಿಬಾನ್ ಬಯಸುತ್ತದೆ ಎಂದು ಹೇಳಿದ್ದಾರೆ. ಆದ್ರೆ, ಜಗತ್ತಿನ ಎದುರು ಮಾನ್ಯತೆಗಾಗಿ ತಾಲಿಬಾನ್ ಇದೀಗ ಭಾರತದ ಹೆಸರನ್ನು ಬಳಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.