ಕಾಬೂಲ್: ಆಫ್ಘನ್ನಲ್ಲಿ 1990ರ ದಶಕದಲ್ಲಿದ್ದ ಶಿಕ್ಷೆಗಳನ್ನು(ಮರಣದಂಡನೆ ಮತ್ತು ಕೈಗಳನ್ನು ಕತ್ತರಿಸುವುದು) ಜಾರಿಗೊಳಿಸಲು ತಾಲಿಬಾನ್ ಯೋಜಿಸಿದೆ. ಆದರೆ ಇದು ಸಾರ್ವಜನಿಕವಾಗಿ ಅಲ್ಲ ಎಂದು ತಾಲಿಬಾನ್ ಸಂಸ್ಥಾಪಕರಲ್ಲಿ ಒಬ್ಬರಾದ ಮುಲ್ಲಾ ನೂರುದ್ದೀನ್ ತುರಾಬಿ ಹೇಳಿದ್ದಾರೆ.
ಆಫ್ಘನ್ನಲ್ಲಿನ ಸದ್ಯದ ಪರಿಸ್ಥಿತಿ ಹಾಗೂ ತಾಲಿಬಾನ್ ಆಡಳಿತ ವೈಖರಿ ಕುರಿತಂತೆ ಮಾತನಾಡಿರುವ ಮುಲ್ಲಾ ನೂರುದ್ದೀನ್ ತುರಾಬಿ, ಆಫ್ಘನ್ನ ಹೊಸ ಸರ್ಕಾರದಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ.
ನಾವು ಈ ಹಿಂದೆಯೂ ಆಫ್ಘನ್ನಲ್ಲಿ ಆಡಳಿತ ನಡೆಸಿದ್ದೇವೆ. ಆಗ ಜನರನ್ನೆಲ್ಲ ಕ್ರೀಡಾಂಗಣದಲ್ಲಿ ಸೇರಿಸಿ ಎಲ್ಲರೆದುರು ಆರೋಪಿಗೆ ಮರಣದಂಡನೆ ವಿಧಿಸುತ್ತಿದ್ದೆವು. ಶಿಕ್ಷೆ ವಿಧಿಸಿದ್ದಕ್ಕಾಗಿ ಎಲ್ಲರೂ ನಮ್ಮನ್ನು ಟೀಕಿಸಿದರು. ನಮ್ಮ ಕಾನೂನುಗಳು ಹೇಗಿರಬೇಕೆಂದು ನಮಗೆ ಯಾರೂ ಹೇಳಿಲ್ಲ. ನಾವು ಇಸ್ಲಾಂ ಅನ್ನು ಅನುಸರಿಸುತ್ತೇವೆ. ಕುರಾನ್ನಲ್ಲಿರುವ ಕಾನೂನುಗಳ ಮೂಲಕ ಆಡಳಿತ ನಡೆಸುತ್ತೇವೆ ಎಂದರು.
ತಾಲಿಬಾನ್, ಕಾಬೂಲ್ ವಶಪಡಿಸಿಕೊಂಡ ಬಳಿಕ, ದೇಶದಲ್ಲಿ 1990 ರ ದಶಕದ ನಿಯಮಗಳು ಎಲ್ಲಿ ಜಾರಿಯಾಗುತ್ತವೋ ಎಂದು ಜನ ಭೀತಿಯಲ್ಲಿ ಬದುಕುತ್ತಿದ್ದಾರೆ. ಈ ಮಧ್ಯೆ, ತುರಾಬಿಯವರ ಈ ಹೇಳಿಕೆ ಜನರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿದೆ.
ತುರಾಬಿ, 60 ರ ದಶಕದ ಆರಂಭದಲ್ಲಿ, ನ್ಯಾಯ ಸಚಿವರಾಗಿದ್ದರು. ತಾಲಿಬಾನಿಗರ ಹಿಂದಿನ ಆಳ್ವಿಕೆಯಲ್ಲಿ ಧರ್ಮದ ಪ್ರಚಾರ ಮತ್ತು ಧರ್ಮ ಪ್ರಚಾರ ತಡೆಗಟ್ಟುವ ಸಚಿವಾಲಯದ ಮುಖ್ಯಸ್ಥರಾಗಿದ್ದರು. ಆ ಸಮಯದಲ್ಲಿ, ಕಾಬೂಲ್‌ನ ಕ್ರೀಡಾಂಗಣದಲ್ಲಿ ಅಥವಾ ವಿಶಾಲವಾದ ಈದ್ಗಾ ಮಸೀದಿಯ ಮೈದಾನದಲ್ಲಿ ನಡೆಯುತ್ತಿದ್ದ ತಾಲಿಬಾನಿಗಳ ಶಿಕ್ಷೆಯನ್ನು ಇಡೀ ಜಗತ್ತೇ ಖಂಡಿಸಿತ್ತು.
ಕರಾಳ ಕಾನೂನಿನ ಒಂದು ಉದಾಹರಣೆ ಇದು