ಕರ್ನಾಟಕ

karnataka

ETV Bharat / international

ತಾಲಿಬಾನ್​​ನಿಂದ ವಿಶ್ವಸಂಸ್ಥೆಗೆ ರಾಯಭಾರಿ ನೇಮಕ

ವಿಶ್ವಸಂಸ್ಥೆಯ ಸಾಮಾನ್ಯ ಮಂಡಳಿಯ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಅಫ್ಘಾನಿಸ್ತಾನ ಮಾತನಾಡಲಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆಯ ರಾಯಭಾರಿಯಾಗಿ ದೋಹಾ ಮೂಲದ ವ್ಯಕ್ತಿಯನ್ನು ತಾಲಿಬಾನ್​ ಸರ್ಕಾರ ನೇಮಿಸಿದೆ.

Taliban nominates Suhail Shaheen as Afghanistan's UN ambassador
ತಾಲಿಬಾನ್​​ನಿಂದ ವಿಶ್ವಸಂಸ್ಥೆಗೆ ರಾಯಭಾರಿ ನೇಮಕ

By

Published : Sep 22, 2021, 5:36 AM IST

Updated : Sep 22, 2021, 5:53 AM IST

ಕಾಬೂಲ್, ಅಫ್ಘಾನಿಸ್ತಾನ : ತಾಲಿಬಾನ್ ಸರ್ಕಾರ ದಿನದಿಂದ ದಿನಕ್ಕೆ ಅಂತಾರಾಷ್ಟ್ರೀಯ ರಾಜಕೀಯದೊಳಗೆ ಗುರುತಿಸಿಕೊಳ್ಳಲು ಹರಸಾಹಸ ನಡೆಸುತ್ತಿದೆ. ಮಂಗಳವಾರ ದೋಹಾ ಮೂಲದ ವಕ್ತಾರ ಸುಹೈಲ್ ಶಾಹೀನ್ ಅವರನ್ನು ಅಫ್ಘಾನಿಸ್ತಾನದ ವಿಶ್ವಸಂಸ್ಥೆಯ ರಾಯಭಾರಿಯಾಗಿ ನೇಮಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಅಫ್ಘಾನಿಸ್ತಾನ ಮಾತನಾಡಬೇಕಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಗೆ ತನ್ನ ದೇಶದ ರಾಯಬಾರಿಯನ್ನು ನೇಮಕ ಮಾಡಲಾಗಿದೆ ಎಂದು ಗ್ರೇಟ್ ಬ್ರಿಟನ್​ನ ಮಾಧ್ಯಮವೊಂದು ವರದಿ ಮಾಡಿದೆ.

ಈ ಮಧ್ಯೆ ಅಫ್ಘಾನಿಸ್ತಾನವನ್ನು ರಾಷ್ಟ್ರಗಳು ಬಹಿಷ್ಕರಿಸಬಾರದೆಂದು ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ವಿಶ್ವದ ನಾಯಕರನ್ನು ಒತ್ತಾಯಿಸಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ತಾಲಿಬಾನ್​ನೊಂದಿಗೆ ಮಾತುಕತೆ ತೀರಾ ಅಗತ್ಯವಿದೆ. ಒಂದು ವೇಳೆ ಅಫ್ಘಾನಿಸ್ತಾನವನ್ನು ಬಹಿಷ್ಕರಿಸಿದೆ, ವಿಶ್ವ ಎರಡು ಭಾಗಗಳಾಗುವ ಸಾಧ್ಯತೆ ಇದೆ ಎಂದು ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ನ್ಯೂಜಿಲ್ಯಾಂಡ್​-ಇಂಗ್ಲೆಂಡ್​ ಕ್ರಿಕೆಟ್‌ ಪ್ರವಾಸ ರದ್ದತಿಯಿಂದ ನಷ್ಟ: ಕಾನೂನು ಸಲಹೆ ಮೊರೆ ಹೋದ ಪಾಕ್

Last Updated : Sep 22, 2021, 5:53 AM IST

ABOUT THE AUTHOR

...view details