ಕಾಬೂಲ್ (ಅಫ್ಘಾನಿಸ್ತಾನ):ಆಫ್ಘನ್ನಲ್ಲಿ ತಾಲಿಬಾನಿಗಳ ಕ್ರೌರ್ಯ ಮುಂದುವರಿಯುತ್ತಲೇ ಇದೆ. 8 ತಿಂಗಳ ಗರ್ಭಿಣಿ, ಮಹಿಳಾ ಪೊಲೀಸ್ ಅನ್ನು ಕುಟುಂಬಸ್ಥರ ಮುಂದೆಯೇ ಉಗ್ರರು ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಮೃತಳನ್ನು ಬಾನು ನೆಗರ್ ಎಂದು ಗುರುತಿಸಲಾಗಿದೆ.
ಘೋರ್ ಪ್ರಾಂತ್ಯದ ರಾಜಧಾನಿ ಫಿರೋಜ್ಕೋಹ್ನ ಮನೆಯಲ್ಲಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ನೆಗರ್ ಅವರನ್ನು ಪತಿ ಹಾಗೂ ಮಕ್ಕಳ ಮುಂದೆಯೇ ಅಮಾನುಷವಾಗಿ, ವಿಕಾರಗೊಳಿಸಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಏಕಾಏಕಿ ಮನೆಗೆ ನುಗ್ಗಿದ ಮೂವರು ಬಂದೂಕುಧಾರಿಗಳು ಮನೆಯಲ್ಲಿದ್ದವರನ್ನೆಲ್ಲಾ ಕಟ್ಟಿಹಾಕಿ, ಆಕೆಯನ್ನು ಗುಂಡು ಹಾರಿಸಿ ಕೊಲೆ ಮಾಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್, ಈ ಹತ್ಯೆಗೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ನಾವು ಭಾಗಿಯಾಗಿಲ್ಲ, ತನಿಖೆ ನಡೆಸುತ್ತಿದ್ದೇವೆ ಎಂದಿದೆ.
ಇದನ್ನೂ ಓದಿ: ಪಂಜ್ಶೀರ್ನ ಎಲ್ಲಾ ಜಿಲ್ಲೆಗಳು ನಮ್ಮ ವಶಕ್ಕೆ ಎಂದ ತಾಲಿಬಾನ್: ರೆಸಿಸ್ಟೆನ್ಸ್ ಫ್ರಂಟ್ ನಿರಾಕರಣೆ
ಆಫ್ಘನ್ಅನ್ನು ತಾಲಿಬಾನ್ ತೆಕ್ಕೆಗೆ ಪಡೆದ ನಂತರ ಹಿಂಸಾಚಾರ ಪ್ರಕರಣಗಳು ಮಿತಿ ಮೀರುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ನಿರಂತರವಾಗಿದ್ದು, ಮಕ್ಕಳು, ಗರ್ಭಿಣಿಯರೆನ್ನದೇ ಎಲ್ಲರಿಗೂ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ವರದಿಗಳಾಗುತ್ತಿವೆ.