ಕಾಬೂಲ್ (ಅಫ್ಘಾನಿಸ್ತಾನ): ದೇಶದಲ್ಲಿ ತಾಲಿಬಾನ್ ಹಾವಳಿ ಮಿತಿ ಮೀರಿದ್ದು, ಉಗ್ರಪಡೆಯನ್ನು ಹಿಮ್ಮೆಟ್ಟಿಸಲು ಅಫ್ಘಾನ್ ಪಡೆ ವೈಮಾನಿಕ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಕೇವಲ ಬಂಡುಕೋರರು ಮಾತ್ರವಲ್ಲದೆ, ಜನಸಾಮಾನ್ಯರೂ ಸಾಯುತ್ತಿದ್ದಾರೆ. ಆದರೂ, ಭದ್ರತಾಪಡೆಗಳು ಉಗ್ರರ ಅಡಗುತಾಣಗಳ ಮೇಲೆ ದಾಳಿ ಮುಂದುವರಿಸಿವೆ.
ಅಫ್ಘಾನಿಸ್ತಾನ ಸರ್ಕಾರವು ಟ್ವಿಟ್ಟರ್ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ತಾಲಿಬಾನ್ ಉಗ್ರರ ಅಡಗುತಾಣಗಳ ಮೇಲೆ ರಕ್ಷಣಾ ಪಡೆಗಳು ವೈಮಾನಿಕ ದಾಳಿ ನಡೆಸಿವೆ. ಕಳೆದ 24 ಗಂಟೆಗಳಲ್ಲಿ ನಡೆದ ಈ ದಾಳಿಯಲ್ಲಿ ಕನಿಷ್ಠ 250 ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರೆ, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.