ಕಾಬೂಲ್:ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಬಂದಾಗಿನಿಂದಲೂ ಚಿತ್ರವಿಚಿತ್ರ ಬೆಳವಣಿಗೆಗಳು ಕಂಡುಬರುತ್ತಿದ್ದು, ಇದೀಗ ಚುನಾವಣಾ ಆಯೋಗವನ್ನೇ ಕಿತ್ತೊಗೆಯಲಾಗಿದೆ.
ಸ್ವತಂತ್ರ ಚುನಾವಣಾ ಆಯೋಗ (IEC) ಮತ್ತು ಸ್ವತಂತ್ರ ಚುನಾವಣಾ ದೂರುಗಳ ಆಯೋಗವನ್ನು ರದ್ದುಗೊಳಿಸಲಾಗಿದ್ದು, ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಗೆ ಇವು 'ಅನಗತ್ಯ ಸಂಸ್ಥೆಗಳು' ಎಂದು ತಾಲಿಬಾನ್ ಸರ್ಕಾರದ ವಕ್ತಾರ ಬಿಲಾಲ್ ಕರಿಮಿ ಹೇಳಿದ್ದಾರೆ.
ಹಿಂದಿನ ಆಡಳಿತದಲ್ಲಿ ಚುನಾವಣಾ ಸಮಿತಿಯ ಮುಖ್ಯಸ್ಥರಾಗಿದ್ದ ಔರಂಗಜೇಬ್ ತಾಲಿಬಾನ್ ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಅವರು ತರಾತುರಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಚುನಾವಣಾ ಆಯೋಗವನ್ನು ವಿಸರ್ಜಿಸುವುದು ಭಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಅವರ ಈ ನಿರ್ಧಾರವು ತಾಲಿಬಾನ್ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಾಲಿಬಾನ್ ಸರ್ಕಾರದ ಹಣಕಾಸು ಇಲಾಖೆ ಉಪ ಸಚಿವರಾಗಿ ಅಬ್ದುಲ್ ಲತೀಫ್ ಅಬ್ದುಲ್ ನೇಮಕ
ಚುನಾವಣಾ ಆಯೋಗದ ಜೊತೆ ಶಾಂತಿ ಸಚಿವಾಲಯ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯವನ್ನೂ ರದ್ದುಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ತಾಲಿಬಾನ್ ಈ ಹಿಂದೆ ಮಹಿಳಾ ವ್ಯವಹಾರಗಳ ಸಚಿವಾಲಯವನ್ನು ತಾಲಿಬಾನ್ ಮುಚ್ಚಿತ್ತು.