ಕಾಬೂಲ್(ಅಫ್ಘಾನಿಸ್ತಾನ) : ತೀವ್ರ ಹಣಕಾಸು ಮುಗ್ಗಟ್ಟು, ಮೂಲಸೌರ್ಕಗಳ ಕೊರತೆಯನ್ನು ಎದುರಿಸಿದ್ದರೂ, ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನ ಭದ್ರತೆಯ ಕಡೆಗೆ ಗಮನ ಹರಿಸುತ್ತಿದ್ದಂತೆ ಕಾಣುತ್ತಿದೆ. ಭಾನುವಾರ ಫ್ರಾನ್ಸ್ ನಿರ್ಮಿತ ರಾಡಾರ್ಗಳು ಅಫ್ಘಾನಿಸ್ತಾನಕ್ಕೆ ಬಂದಿದ್ದು, ಅವುಗಳನ್ನು ಅಫ್ಘಾನಿಸ್ತಾನದ ಪ್ರಮುಖ ನಗರಗಳಲ್ಲಿ ಅಳವಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಫ್ರಾನ್ಸ್ನಿಂದ ಬಂದ ಮೂರು ರಾಡಾರ್ಗಳನ್ನು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್, ಬಾಲ್ಖ್ ಮತ್ತು ಹೆರಾತ್ ಪ್ರಾಂತ್ಯಗಳಲ್ಲಿ ಇರಿಸಲಾಗುತ್ತದೆ ಎಂದು ಸ್ಥಳೀಯ ಮಾಧ್ಯಮವಾದ ಖಾಮಾ ಪ್ರೆಸ್ ವರದಿ ಮಾಡಿದೆ.
ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಸಾರಿಗೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವು ರಾಡಾರ್ಗಳು ಆಗಮಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಫ್ರಾನ್ಸ್ ಕಂಪನಿಯಾದ ಥೇಲ್ಸ್ನೊಂದಿಗೆ 112 ಮಿಲಿಯನ್ ಯೂರೋ ಒಪ್ಪಂದವನ್ನು ಅಫ್ಘಾನಿಸ್ತಾನ ಮಾಡಿಕೊಂಡಿತ್ತು.
ಒಪ್ಪಂದದ ಪ್ರಕಾರ ಇನ್ನೂ ಹಲವು ರಾಡಾರ್ಗಳು ಅಫ್ಘಾನಿಸ್ತಾನಕ್ಕೆ ಬರಬೇಕಿದ್ದು, 2023ರ ವೇಳೆಗೆ ಉಳಿದ ರಾಡಾರ್ಗಳು ಬರಲಿವೆ ಎಂದು ಸಾರಿಗೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ, ಖಾಮಾ ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ:James Webb Telescope: ಉಡಾವಣೆಯಾದ ಜೇಮ್ಸ್ ವೆಬ್: ಜಗತ್ತಿನ ಮತ್ತಷ್ಟು ಕೌತುಕ ಬಿಚ್ಚಿಡುವ ಸಾಧ್ಯತೆ