ದೋಹಾ (ಕತಾರ್): ಶೇರ್ ಮುಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜಾಯ್ ನೇತೃತ್ವದ ತಾಲಿಬಾನ್ ನಿಯೋಗವು ಶುಕ್ರವಾರ ಕತಾರ್‌ನಲ್ಲಿ ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಿದೆ. ಈ ವೇಳೆ ಆಫ್ಘನ್ನ ಪ್ರಸ್ತುತ ಬೆಳವಣಿಗೆಗಳನ್ನು ಕುರಿತು ಚರ್ಚಿಸಲಾಗಿದೆ.
ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್, ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು, ತೋರ್ಖಾನ್ ಸ್ಪಿನ್ ಬೋಲ್ಡಾಕ್ನ ಜನರ ಸಂಚಾರ ಕುರಿತಂತೆ ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ.
ತಾಲಿಬಾನ್ ನಿಯೋಗವು, ಕತಾರ್ನಲ್ಲಿರುವ ಪಾಕ್ ರಾಯಭಾರಿ ಕಚೇರಿಗೆ ಭೇಟಿ ನೀಡಿ, ಆಫ್ಘನ್ನ ಪರಿಸ್ಥಿತಿ, ಮಾನವೀಯ ನೆರವು, ದ್ವಿಪಕ್ಷೀಯ ಸಂಬಂಧಗಳು, ಪರಸ್ಪರ ಹಿತಾಸಕ್ತಿ, ಗೌರವ, ಆಫ್ಘನ್ ಪುನರ್ನಿರ್ಮಾಣ ಮತ್ತು ಅಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ ಎಂದು ಶಾಹೀನ್ ಟ್ವೀಟ್ ಮಾಡಿದ್ದಾರೆ.