ಲಾಹೂರ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದು ಅಟ್ಟಹಾಸ ಮೆರೆಯುತ್ತಿರುವ ಉಗ್ರ ಸಂಘಟನೆ ತಾಲಿಬಾನ್ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಮಾತನಾಡಿದ್ದು, ತಾಲಿಬಾನಿಗಳು ಸಕಾರಾತ್ಮಕ ಮನಸ್ಥಿತಿ ಹೊಂದಿದ್ದಾರೆ. ಮಹಿಳೆಯರಿಗೆ ಉದ್ಯೋಗ ಮಾಡಲು ಅವರು ಅವಕಾಶ ನೀಡುತ್ತಾರೆ ಎಂದಿದ್ದಾರೆ.
ತಾಲಿಬಾನಿಗಳಿಗೆ ಕ್ರಿಕೆಟ್ ಅಂದ್ರೆ ಇಷ್ಟ, ಅವರು ಪಾಸಿಟಿವ್ ಆಗಿದ್ದಾರೆ: ಶಾಹಿದ್ ಅಫ್ರಿದಿ - ಪಾಕಿಸ್ತಾನ
ತಾಲಿಬಾನಿಗಳ ವಿಚಾರದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಧನಾತ್ಮಕ ಮನೋಭಾದೊಂದಿಗೆ ತಾಲಿಬಾನ್ ಬಂದಿದೆ - ಪಾಕ್ ಕ್ರಿಕೆಟಿಗ ಆಫ್ರಿದಿ ವಿವಾದ
ತಾಲಿಬಾನ್ ಕ್ರಿಕೆಟ್ ಇಷ್ಟಪಡುತ್ತಿದ್ದು, ಪಾಕಿಸ್ತಾನದ ವಿರುದ್ಧದ ಕ್ರಿಕೆಟ್ ಸರಣಿಯನ್ನು ಬೆಂಬಲಿಸುತ್ತದೆ. ಕ್ರಿಕೆಟ್ ಬೆಳೆಯಲು ತಾಲಿಬಾನ್ ಸಹಾಯ ಮಾಡುತ್ತದೆ ಎಂದು ಅಫ್ರಿದಿ ಹೇಳಿದ್ದಾರೆ.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಮೀದ್ ಶಿನ್ವಾರಿ, ದೇಶದ ಆಟಗಾರರು ಮತ್ತು ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ. ಮುಂದಿನ ವಾರ ಅಫ್ಘಾನಿಸ್ತಾನ ತಂಡ ಶ್ರೀಲಂಕಾಗೆ ತೆರಳುವ ಮುನ್ನ ಎಸಿಬಿ ತನ್ನ ಮೂರನೇ ಶಿಬಿರ ನಡೆಸಲು ಯೋಜಿಸುತ್ತಿದೆ ಎಂದಿದ್ದರು.