ಕರ್ನಾಟಕ

karnataka

ETV Bharat / international

ವಾಲಿಬಾಲ್​​ ಆಟಗಾರ್ತಿ​​​ ಶಿರಚ್ಛೇದ ಮಾಡಿದ ತಾಲಿಬಾನ್​! - ವಾಲಿಬಾಲ್​​ ಮಹಿಳಾ ಪ್ಲೇಯರ್

ಆಫ್ಘಾನ್​​ನ ಜೂನಿಯರ್ ಮಹಿಳಾ ವಾಲಿಬಾಲ್ ಟೀಂನ ಪ್ಲೇಯರ್​ವೋರ್ವಳ ಶಿರಚ್ಛೇದ ಮಾಡಲಾಗಿದೆ. ಇದರ ಬಗ್ಗೆ ಹೊರಗಡೆ ಬಾಯಿಬಿಡದಂತೆ ತಾಲಿಬಾನ್​ ಆಟಗಾರ್ತಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದರಂತೆ. ಕಳೆದ ವಾರ ಈ ಘಟನೆ ನಡೆದಿದ್ದು, ಇದೀಗ ತಂಡದ ಕೋಚ್​ ಮಾಹಿತಿ ಹಂಚಿಕೊಂಡಿದ್ದಾರೆ. ಖಾಸಗಿಯಾಗಿ ಮಾತನಾಡಿರುವ ಕೋಚ್​ ಈ ಮಾಹಿತಿ ಹೊರ ಹಾಕಿದ್ದಾರೆ..

Taliban behead junior volleyball player
Taliban behead junior volleyball player

By

Published : Oct 20, 2021, 7:13 PM IST

Updated : Oct 20, 2021, 10:35 PM IST

ಕಾಬೂಲ್​(ಆಫ್ಘಾನಿಸ್ತಾನ) :ಆಫ್ಘಾನಿಸ್ತಾನ​ದಲ್ಲಿ ತಾಲಿಬಾನ್​ ಆಡಳಿತದಿಂದ ಅರಾಜಕತೆ ಸೃಷ್ಟಿಯಾಗಿದೆ. ಉಗ್ರರ ಧೋರಣೆಯಿಂದ ಅಲ್ಲಿನ ಮಹಿಳೆಯರ ಪಾಡು ಹೇಳತೀರದ್ದಾಗಿದೆ. ಇದರ ಮಧ್ಯೆ ರಾಷ್ಟ್ರೀಯ ವಾಲಿಬಾಲ್​ ತಂಡದ ಮಹಿಳಾ ಆಟಗಾರ್ತಿ ಶಿರಚ್ಛೇದ ಮಾಡಿರುವ ವರದಿ ತಡವಾಗಿ ಬೆಳಕಿಗೆ ಬಂದಿದೆ.

ಆಫ್ಘಾನಿಸ್ತಾನದಲ್ಲಿ ಶಿಯಾ ಕಾನೂನು ಜಾರಿಗೊಳ್ಳುತ್ತಿದೆ. ಮಹಿಳೆಯರ ಮೇಲೆ ಇನ್ನಿಲ್ಲದ ಕಠಿಣ ಕಾನೂನು ಹೇರಲಾಗುತ್ತಿದೆ. ಈಗಾಗಲೇ ಮಹಿಳೆಯರಿಗೆ ಕ್ರಿಕೆಟ್ ಸೇರಿದಂತೆ ಇತರೆ ಯಾವುದೇ ಕ್ರೀಡೆಗಳಲ್ಲಿ ಆಡಲು ಅವಕಾಶವಿಲ್ಲವೆಂದು ತಾಲಿಬಾನ್​ ಕಟ್ಟಪ್ಪಣೆ ಹೊರಡಿಸಿದೆ. ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲೆ ತೀವ್ರ ನಿರ್ಬಂಧಗಳನ್ನು ತಾಲಿಬಾನ್​ಗಳು ವಿಧಿಸಿದ್ದಾರೆ. ಇವೆಲ್ಲದರ ಮಧ್ಯೆ ಅವರ ಕ್ರೂರ ವರ್ತನೆ ಮತ್ತೊಮ್ಮೆ ಬಹಿರಂಗಗೊಂಡಿದೆ.

ಇದನ್ನೂ ಓದಿರಿ:ಕೆರೆಗೆ ಉರುಳಿಬಿದ್ದ ಶಾಲಾ ವಿದ್ಯಾರ್ಥಿಗಳನ್ನ ಹೊತ್ತೊಯ್ಯುತ್ತಿದ್ದ ಬಸ್​: ಓರ್ವ ಸಾವು, ಕೆಲವರಿಗೆ ಗಾಯ

ಆಫ್ಘಾನ್​​ನ ಜೂನಿಯರ್ ಮಹಿಳಾ ವಾಲಿಬಾಲ್ ಟೀಂನ ಪ್ಲೇಯರ್​ವೋರ್ವಳ ಶಿರಚ್ಛೇದ ಮಾಡಲಾಗಿದೆ. ಇದರ ಬಗ್ಗೆ ಹೊರಗಡೆ ಬಾಯಿಬಿಡದಂತೆ ತಾಲಿಬಾನ್​ ಆಟಗಾರ್ತಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದರಂತೆ. ಕಳೆದ ವಾರ ಈ ಘಟನೆ ನಡೆದಿದ್ದು, ಇದೀಗ ತಂಡದ ಕೋಚ್​ ಮಾಹಿತಿ ಹಂಚಿಕೊಂಡಿದ್ದಾರೆ. ಖಾಸಗಿಯಾಗಿ ಮಾತನಾಡಿರುವ ಕೋಚ್​ ಈ ಮಾಹಿತಿ ಹೊರ ಹಾಕಿದ್ದಾರೆ.

ಯಾವ ಕಾರಣಕ್ಕಾಗಿ ಶಿರಚ್ಛೇದ?

ಮಹ್ಜಬಿನ್​ ಹಕಿಮಿ ಎಂಬ ಮಹಿಳಾ ಆಟಗಾರ್ತಿ ಆಫ್ಘಾನಿಸ್ತಾನದಲ್ಲಿ ಅಶ್ರಫ್​ ಘನಿ ಸರ್ಕಾರ ಪತನವಾಗುವುದಕ್ಕೂ ಮುಂಚಿತವಾಗಿ ಅಲ್ಲಿನ ಕ್ಲಬ್​ವೊಂದರಲ್ಲಿ ವಾಲಿಬಾಲ್​​ ಆಡಿದ್ದರು. ಹೀಗಾಗಿ, ತಾಲಿಬಾನ್ ಆಕೆಯ ಶಿರಚ್ಛೇದ ಮಾಡಿದೆ ಎನ್ನಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್​​ ಆಗಿತ್ತು.

ಘಟನೆ ನಡೆಯುತ್ತಿದ್ದಂತೆ ಇಬ್ಬರು ಮಹಿಳಾ ಪ್ಲೇಯರ್ಸ್ ಮಾತ್ರ ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ. ಕೆಲವರು ಕಾಬೂಲ್​ನಲ್ಲಿ ಸಿಲುಕಿಕೊಂಡಿದ್ದಾರೆಂದು ಕೋಚ್​ ಮಾಹಿತಿ ಹಂಚಿಕೊಂಡಿದ್ದಾರೆ.

Last Updated : Oct 20, 2021, 10:35 PM IST

ABOUT THE AUTHOR

...view details