ಕರ್ನಾಟಕ

karnataka

ETV Bharat / international

Watch: ಕಾರಿನಲ್ಲಿ ಆಫ್ಘನ್​ ಧ್ವಜ ಪ್ರದರ್ಶಿಸಿದ್ದಕ್ಕೆ ಯುವಕನ ಬಂಧಿಸಿದ ತಾಲಿಬಾನಿಗಳು.. - ತಾಲಿಬಾನ್ ಉಗ್ರರು

ಕಾರಿನ ಮುಂಭಾಗದ ವಿಂಡ್‌ಸ್ಕ್ರೀನ್‌ನಲ್ಲಿ ಅಫ್ಘನ್​ ಧ್ವಜ ಪ್ರದರ್ಶಿಸಿದ ಯುವಕನ ಕೈಕಟ್ಟಿ ಹಾಕಿದ ತಾಲಿಬಾನ್ ಉಗ್ರರು ಆತನನ್ನು ಬಂಧಿಸಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

displaying Afghan flag on car
ಕಾರಿನಲ್ಲಿ ಅಫ್ಘನ್​ ಧ್ವಜ ಪ್ರದರ್ಶಿಸಿದ್ದಕ್ಕೆ ಯುವಕನ ಬಂಧಿಸಿದ ತಾಲಿಬಾನಿಗಳು

By

Published : Aug 20, 2021, 5:21 PM IST

ಕಾಬೂಲ್​ (ಅಫ್ಘಾನಿಸ್ತಾನ):ನಿನ್ನೆ ಅಫ್ಘಾನಿಸ್ತಾನ ತನ್ನ 102ನೇ ಸ್ವಾತಂತ್ರ್ಯ ದಿನವಾಗಿದ್ದು, ಇದರ ಪ್ರಯುಕ್ತ ತನ್ನ ಕಾರಿನ ಮುಂಭಾಗದ ವಿಂಡ್‌ಸ್ಕ್ರೀನ್‌ನಲ್ಲಿ ಅಫ್ಘನ್​ ಧ್ವಜ ಪ್ರದರ್ಶಿಸಿದ ಯುವಕನನ್ನು ತಾಲಿಬಾನ್ ಉಗ್ರರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ, ಧ್ವಜ ಕಾಣುತ್ತಿದ್ದಂತೆಯೇ ಯುವಕನ ಕಾರು ಅಡ್ಡಗಟ್ಟಿದ ಉಗ್ರರು, ಬಾವುಟವನ್ನು ಎಳದು ಬಿಸಾಕಿದ್ದಾರೆ. ಯುವಕನ ಕೈಗಳನ್ನು ಬೆನ್ನಿಗೆ ಕಟ್ಟಿ ಕರೆದೊಯ್ದಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಭಾರತೀಯ ಕಾನ್ಸುಲೇಟ್​ ಕಚೇರಿಗಳಿಗೆ ನುಗ್ಗಿ ಕಾರುಗಳನ್ನ ಹೊತ್ತೊಯ್ದ ತಾಲಿಬಾನ್

ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡ ಬಳಿಕ ತಾಲಿಬಾನ್​ ಉಗ್ರರು ಮನೆ - ಮನೆಗೆ ನುಗ್ಗಿ ರಾಷ್ಟ್ರೀಯ ಗುಪ್ತಚರ ಸಂಸ್ಥೆಯಾದ 'ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ' ಹಾಗೂ ಯುಎಸ್ ಮತ್ತು ನ್ಯಾಟೋ ಪಡೆಗಳೊಂದಿಗೆ ಕೆಲಸ ಮಾಡುತ್ತಿರುವ ಆಫ್ಘನ್‌ರನ್ನು ಪತ್ತೆ ಹಚ್ಚುತ್ತಿದೆ. ಸ್ವಾತಂತ್ರ್ಯ ದಿನದ ನಿಮಿತ್ತ ಧ್ವಜ ಹಿಡಿದು ಬಂದವರ ಮೇಲೆ ಹಾಗೂ ತಾಲಿಬಾನ್​ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಗುಂಡಿನ ದಾಳಿ ನಡೆಸುತ್ತಿದೆ.

ABOUT THE AUTHOR

...view details