ಕಾಬೂಲ್ :ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಹಣಕಾಸು ಇಲಾಖೆಯ ಉಪ ಸಚಿವರಾಗಿ ಅಬ್ದುಲ್ ಲತೀಫ್ ನಜಾರಿ ಅವರನ್ನು ನೇಮಕ ಮಾಡಿದೆ. ಪಿಹೆಚ್ಡಿ ಪಡೆದಿರುವ ಡಾ.ಅಬ್ದುಲ್ ಲತೀಫ್ ಅವರು ಪ್ರಸ್ತುತ ಕಾಬೂಲ್‌ನ ವಿಶ್ವವಿದ್ಯಾನಿಲಯವೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ ಹೆಬ್ತುಲ್ಲಾ ಅಖುಂದ್‌ಜಾದಾ ಅವರ ಆದೇಶದ ಮೇರೆಗೆ ಅಬ್ದುಲ್ ಲತೀಫ್ ನಜಾರಿ ಅವರನ್ನು ಹಣಕಾಸು ಇಲಾಖೆಯ ಉಪ ಸಚಿವರಾಗಿ ನೇಮಿಸಲಾಗಿದೆ.
ಈ ವಿಚಾರವನ್ನು ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯದ ಉಪ ಸಚಿವ ಮತ್ತು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಟ್ವೀಟ್ ಮಾಡಿ ತಿಳಿಸಿದ್ದಾರೆ ಎಂದು ಆಫ್ಘಾನಿಸ್ತಾನದ ಖಾಮಾ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.