ಕರ್ನಾಟಕ

karnataka

ETV Bharat / international

ಪುರುಷ ಪ್ರಧಾನ ಸರ್ಕಾರದಲ್ಲಿ ಮಹಿಳೆಯರಿಗಿಲ್ಲ ಸ್ಥಾನ.. ಉಪ ಮಂತ್ರಿಗಳ ಪಟ್ಟಿಯೂ ಬಿಡುಗಡೆ ಮಾಡಿದ ತಾಲಿಬಾನ್​​ - ತಾಲಿಬಾನ್​

ಕ್ಯಾಬಿನೆಟ್​ನಲ್ಲಿ ಮಹಿಳೆಯರಿಗೆ ಸ್ಥಾನ ನೀಡಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗ್ರಹ ಬಂದಿದ್ದರೂ ಅದಕ್ಕೆ ಕ್ಯಾರೇ ಎನ್ನದ ತಾಲಿಬಾನ್​ ಸರ್ಕಾರ, ಪುರುಷರನ್ನೊಳಗೊಂಡ ಸಚಿವ ಸಂಪುಟ ರಚನೆ ಮಾಡಿದೆ.

Taliban
ತಾಲಿಬಾನ್ ಆಡಳಿತಗಾರರು

By

Published : Sep 21, 2021, 1:08 PM IST

ಕಾಬೂಲ್ (ಅಫ್ಘಾನಿಸ್ತಾನ):ತಾಲಿಬಾನ್ ಆಡಳಿತಗಾರರು ಮಹಿಳಾ ಉದ್ಯೋಗಿಗಳನ್ನು ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಪ್ರವೇಶಿಸದಂತೆ ಈಗಾಗಲೇ ನಿರ್ಬಂಧಿಸಿದ್ದಾರೆ. ಅದರಂತೆ ಇದೀಗ ಸಚಿವ ಸ್ಥಾನ ಹಂಚಿಕೆಯಾಗಿದ್ದು, ಪಟ್ಟಿಯಲ್ಲೂ ಪುರುಷರು ಬಿಟ್ಟರೆ ಮಹಿಳೆಯರ ಹೆಸರು ಮಾಯವಾಗಿದೆ.

ಅಷ್ಟೇ ಅಲ್ಲದೆ, ಈ ಪುರುಷ ಪ್ರಧಾನ ಸರ್ಕಾರದಲ್ಲಿ ಉಪ ಮಂತ್ರಿಗಳನ್ನು ಸಹ ನೇಮಕ ಮಾಡಿದೆ. ಕ್ಯಾಬಿನೆಟ್​ನಲ್ಲಿ ಮಹಿಳೆಯರಿಗೆ ಸ್ಥಾನ ನೀಡಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗ್ರಹ ಬಂದಿದ್ದರೂ ಅದಕ್ಕೆ ಕ್ಯಾರೇ ಎನ್ನದ ತಾಲಿಬಾನ್​ ಸರ್ಕಾರ, ಪುರುಷರನ್ನೊಳಗೊಂಡ ಸಚಿವ ಸಂಪುಟ ರಚನೆ ಮಾಡಿದೆ.

ಹೊಸ ಕ್ಯಾಬಿನೆಟ್​ ಪಟ್ಟಿಯನ್ನು ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಕಾಬೂಲ್​ನಲ್ಲಿ ನಡೆದ ಹೊಸ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದ್ದಾರೆ.

ABOUT THE AUTHOR

...view details