ಹೆರಾತ್(ಅಫ್ಘಾನಿಸ್ತಾನ):ಪಶ್ಚಿಮ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಮತ್ತು ಸಶಸ್ತ್ರ ಗುಂಪಿನ ನಡುವೆ ಗುಂಡಿನ ಕಾಳಗ ನಡೆದಿದ್ದು, ಸುಮಾರು ಹದಿನೇಳು ಜನರು ಸಾವನ್ನಪ್ಪಿರುವುದು ವರದಿಯಾಗಿದೆ.
ಏಳು ಮಕ್ಕಳು, ಮೂವರು ಮಹಿಳೆಯರು ಮತ್ತು ಏಳು ವ್ಯಕ್ತಿಗಳು ಸೇರಿದಂತೆ 17 ಜನರ ಮೃತದೇಹಗಳನ್ನು ಹೆರಾತ್ ಪ್ರಾಂತ್ಯದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅವರೆಲ್ಲರೂ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.