ಕರ್ನಾಟಕ

karnataka

ETV Bharat / international

ಆಫ್ಘನ್​ನಲ್ಲಿ ಸರ್ಕಾರ ರಚಿಸಲು ತಾಲಿಬಾನ್​ ಹೆಣಗಾಟ.. ಮುಂದಿನ ವಾರಕ್ಕೆ ಮುಂದೂಡಿಕೆ - ತಾಲಿಬಾನ್​ ವಕ್ತಾರ ಜಬೀವುಲ್ಲಾ ಮುಜಾಹಿದ್

ಆಫ್ಘನ್​ನಲ್ಲಿ ಮುಂದಿನ ವಾರ ಸರ್ಕಾರ ರಚಿಸುವುದಾಗಿ ತಾಲಿಬಾನ್ ಘೋಷಿಸಿದೆ. ಸ್ಥಿರ ಸರ್ಕಾರ ಕೊಡುವ ನಿಟ್ಟಿನಲ್ಲಿ ವಿಳಂಬವಾಗುತ್ತಿದೆ ಎಂದು ತಾಲಿಬಾನ್​ ವಕ್ತಾರರು ತಿಳಿಸಿದ್ದಾರೆ.

ತಾಲಿಬಾನ್
ತಾಲಿಬಾನ್

By

Published : Sep 5, 2021, 8:05 AM IST

ಪೇಶಾವರ್ (ಪಾಕಿಸ್ತಾನ): ಆಫ್ಘನ್​ನಲ್ಲಿ ಚುನಾಯಿತ ಸರ್ಕಾರವನ್ನು ಉರುಳಿಸಿ, ಅಧಿಪತ್ಯ ಸಾಧಿಸಿರುವ ತಾಲಿಬಾನ್​ ಸರ್ಕಾರ ರಚನೆಗೆ ಹೆಣಗಾಡುತ್ತಿದೆ. ಬಂಡುಕೋರರ ಗುಂಪು ಕಾಬೂಲ್‌ನಲ್ಲಿ ಹೊಸ ಸರ್ಕಾರ ರಚನೆಯನ್ನು ಶನಿವಾರ ಘೋಷಿಸುವ ನಿರೀಕ್ಷೆಯಿತ್ತು.

ಆದರೆ, ಸರ್ಕಾರ ರಚನೆಯನ್ನು ಮುಂದಿನ ವಾರಕ್ಕೆ ಮುಂದೂಡಿರುವುದಾಗಿ ತಾಲಿಬಾನ್​ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ಹೊಸ ಸರ್ಕಾರ ಮತ್ತು ಕ್ಯಾಬಿನೆಟ್ ಸದಸ್ಯರ ಕುರಿತು ಮುಂದಿನ ವಾರ ಘೋಷಣೆ ಮಾಡಲಾಗುವುದು ಎಂದು ಮುಜಾಹಿದ್ ತಿಳಿಸಿದ್ದಾರೆ.

ಆಗಸ್ಟ್​ 15 ರಂದು ಕಾಬೂಲ್​ಅನ್ನು ವಶಪಡಿಸಿಕೊಂಡರೂ, ಸರ್ಕಾರ ರಚಿಸುವುದಕ್ಕೆ ಉಗ್ರರು ಹಿಂದೇಟು ಹಾಕುತ್ತಿದ್ದಾರೆ. ಆಗಸ್ಟ್ 15 ರಿಂದ ಈವರೆಗೆ ಸರ್ಕಾರ ರಚಿಸುತ್ತೇವೆಂದು ಘೋಷಿಸಿದ್ದ ತಾಲಿಬಾನ್​ ಎರಡು ಬಾರಿ ವಿಳಂಬ ಮಾಡಿದೆ. ಸರ್ಕಾರ ರಚನೆಯ ಉಸ್ತುವಾರಿಯನ್ನು ತಾಲಿಬಾನ್​ನ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಪಾಕ್​ ಐಎಸ್​ಐ ಮುಖ್ಯಸ್ಥ ಅಫ್ಘನ್​ಗೆ ಭೇಟಿ : ಅಂತಾರಾಷ್ಟ್ರೀಯ ಸಮುದಾಯದಲ್ಲಿ ಕುತೂಹಲ

ಸರ್ಕಾರ ರಚನೆ ಕುರಿತು ವಿವಿಧ ಗುಂಪುಗಳೊಂದಿಗೆ ಮಾತುಕತೆ ನಡೆಸಲು ತಾಲಿಬಾನ್ ಖಲೀಲ್​ ಹಕ್ಕಾನಿ ನೇತೃತ್ವದ ಸಮಿತಿಯೊಂದನ್ನು ರಚಿಸಿತ್ತು. ಕಾಬೂಲ್​ನಲ್ಲಿ ಸ್ಥಿರ ಸರ್ಕಾರ ರಚಿಸುವುದಕ್ಕೆ ತಾಲಿಬಾನ್​ ಪ್ರಯತ್ನ ನಡೆಸುತ್ತಿದ್ದು, ನಮ್ಮ ಸರ್ಕಾರ ಜಗತ್ತಿಗೆ ಸ್ವೀಕಾರಾರ್ಹವಾಗಿರಲಿದೆ. ಹಾಗಾಗಿ ಸರ್ಕಾರ ರಚನೆ ವಿಳಂಬವಾಗಲಿದೆ ಎಂದು ಹಕ್ಕಾನಿ ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: ಅಫ್ಘನ್​​ನಲ್ಲಿ ಮಹಿಳೆಯರಿಂದ ಹಕ್ಕುಗಳಿಗಾಗಿ ಪ್ರತಿಭಟನೆ : ತಾಲಿಬಾನಿಗಳಿಂದ ಅಶ್ರುವಾಯು ಪ್ರಯೋಗ

ಆಫ್ಘನ್​ನ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸಹೋದರ ತಾಲಿಬಾನ್​ಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ತಾಲಿಬಾನ್ ಸರ್ಕಾರದಲ್ಲಿ ಉನ್ನತ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಅವರಿದ್ದಾರೆ.

ABOUT THE AUTHOR

...view details