ತೈವಾನ್:ದಕ್ಷಿಣ ಅಮೆರಿಕಾದ ಪುಟ್ಟ ರಾಷ್ಟ್ರ ಗಯಾನಾ, ತೈಪೆಯಲ್ಲಿ ರಾಯಭಾರ ಕಚೇರಿ ತೆರೆಯಲು ಕುರಿತಾಗಿ ಒಪ್ಪಂದ ಮಾಡಿಕೊಳ್ಳುವ ವಿರುದ್ಧ ಚೀನಾ ಬೆದರಿಕೆ ಒಡ್ಡಿದ್ದು, ಇದೀಗ ಈ ಒಪ್ಪಂದ ಮುರಿದು ಬಿದ್ದಿದೆ ಎಂದು ತೈವಾನ್ ಚೀನಾ ವಿರುದ್ಧ ಆರೋಪಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ವಕ್ತಾರ ವಾಂಗ್ ವೆನ್ಬಿನ್, ಗಯಾನಾ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು ಎಂದು ಉತ್ತಾಯಿಸಿದ್ದರು.
ತೈವಾನ್ ಚೀನಾದ ಒಂದು ಭಾಗವಾಗಿದೆ, ವಿಶ್ವದಲ್ಲಿ ಕೇವಲ ಒಂದು ಚೀನಾ ಮಾತ್ರವಿದೆ ಎಂದು ತಿರುಗೇಟು ನೀಡಿದ್ದರು. ಸಂಬಂಧಿತ ಪಕ್ಷವು ಒಂದೇ ಚೀನಾ ಎಂಬ ತತ್ವಕ್ಕೆ ಬದ್ಧವಾಗಿರಲಿದೆ ಎಂಬ ವಿಶ್ವಾಸವಿದೆ. ಈ ರೀತಿಯ ಒಪ್ಪಂದ, ವಿನಿಮಯದಿಂದ ದೂರವಿರಲಿದೆ ಎಂದು ತಿಳಿಸಿದ್ದಾರೆ.