ಕರ್ನಾಟಕ

karnataka

ETV Bharat / international

ಡಮಾಸ್ಕಸ್‌ ಬಳಿ ಇಸ್ರೇಲ್‌ ಕ್ಷಿಪಣಿ ದಾಳಿ: ನಾಲ್ವರು ಸೈನಿಕರಿಗೆ ಗಾಯ - ಸಿರಿಯಾ ರಾಜಧಾನಿ ಡಮಾಸ್ಕಸ್

ಇಂದು ಸಿರಿಯಾ ರಾಜಧಾನಿ ಡಮಾಸ್ಕಸ್​ನ ದಕ್ಷಿಣ ಭಾಗದಲ್ಲಿ ಇಸ್ರೇಲ್​ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.

Israel fired missiles on suburbs of capital Damascus
Israel fired missiles on suburbs of capital Damascus

By

Published : Apr 8, 2021, 9:23 AM IST

ಡಮಾಸ್ಕಸ್‌: ಸಿರಿಯಾ ರಾಜಧಾನಿ ಡಮಾಸ್ಕಸ್‌ ಮತ್ತು ದಕ್ಷಿಣ ಉಪನಗರಗಳ ಸಮೀಪ ಇಸ್ರೇಲ್‌ ಇಂದು ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.

ಡಮಾಸ್ಕಸ್​ನ ದಕ್ಷಿಣ ಭಾಗದಲ್ಲಿರುವ ಬ್ರಿಟನ್ ಮೂಲದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಮತ್ತು ಮಿಲಿಟರಿ ಪೋಸ್ಟ್​ಗಳನ್ನು ಇಸ್ರೇಲ್​ ಕ್ಷಿಪಣಿಗಳು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗ್ತಿದೆ.

ಸಿರಿಯಾದ ಲೆಬನಾನಿನ ಗಡಿ ಗ್ರಾಮವಾದ ಹೌಲಾ ಪ್ರದೇಶದಿಂದ ಕ್ಷಿಪಣಿಗಳನ್ನು ಗುರಿಯಾಗಿಸಿ ದಾಳಿ ನಡೆದಿದ್ದು, ನಂತರ ಸ್ಫೋಟದ ಸದ್ದು ದಕ್ಷಿಣ ಲೆಬನಾನ್‌ನ ಕೆಲವು ಭಾಗಗಳಿಗೆ ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇರಾನ್ ಸಿರಿಯಾಗೆ ಮಿತ್ರ ರಾಷ್ಟ್ರವಾಗಿದ್ದು, ಇದು ಪಕ್ಕದ ಇಸ್ರೇಲ್​ಗೆ ಭೀತಿಯನ್ನುಂಟು ಮಾಡಿದೆ. ಇದರಿಂದಾಗಿ ಆಗಾಗ್ಗೆ ಸಿರಿಯಾ ಸೇನೆಯ ಮೇಲೆ ಇಸ್ರೇಲ್​ ದಾಳಿ ಮಾಡುತ್ತದೆ.

ABOUT THE AUTHOR

...view details