ಕಾಬೂಲ್:ಪೂರ್ವ ಅಫ್ಘಾನಿಸ್ತಾನದ ಪ್ರಾಂತೀಯ ಗವರ್ನರ್ ನ ಬೆಂಗಾವಲು ಕಾರಿನಲ್ಲಿ ಬಾಂಬ್ ಇರಿಸಿ ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನ್ ರಾಜ್ಯಪಾಲರನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ಬಾಂಬ್ ದಾಳಿ: 8 ಜನರು ಸಾವು - ಅಫ್ಘಾನಿಸ್ತಾನ ಆತ್ಮಾಹುತಿ ಬಾಂಬ್ ದಾಳಿ
ಪೂರ್ವ ಅಫ್ಘಾನಿಸ್ತಾನದ ಪ್ರಾಂತೀಯ ಗವರ್ನರ್ ನ ಬೆಂಗಾವಲು ಕಾರಿನಲ್ಲಿ ಬಾಂಬ್ ಇರಿಸಿ ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಲಾಗ್ಮಾನ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಉಗ್ರರು ಗುರಿಯಾಗಿಸಿಕೊಂಡಿದ್ದ ರಾಜ್ಯಪಾಲ ರಹಮತುಲ್ಲಾ ಯರ್ಮಲ್ ಗೆ ಯಾವುದೇ ಹಾನಿಯಾಗಿಲ್ಲ ಎಂದು ಅವರ ವಕ್ತಾರ ಅಸದುಲ್ಲಾ ದಾವ್ಲತ್‌ಝೈ ಹೇಳಿದ್ದಾರೆ.
ಆದರೆ, ಲಾಗ್ಮಾನ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಉಗ್ರರು ಗುರಿಯಾಗಿಸಿಕೊಂಡಿದ್ದ ರಾಜ್ಯಪಾಲ ರಹಮತುಲ್ಲಾ ಯರ್ಮಲ್ ಗೆ ಯಾವುದೇ ಅಪಾಯವಾಗಿಲ್ಲ ಎಂದು ಅವರ ವಕ್ತಾರ ಅಸದುಲ್ಲಾ ದಾವ್ಲತ್‌ಝೈ ಹೇಳಿದ್ದಾರೆ.
ಪ್ರಾಂತೀಯ ರಾಜಧಾನಿಯಾದ ಮಿಹ್ಟೆರ್ಲಂ ನಲ್ಲಿ ನಡೆದ ಈ ದಾಳಿಯಲ್ಲಿ ಯರ್ಮಲ್ ಅವರ ನಾಲ್ವರು ಅಂಗರಕ್ಷಕರು ಸಾವನ್ನಪ್ಪಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಸುಮಾರು 38 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ರಾಜ್ಯಪಾಲರ ಇಬ್ಬರು ಅಂಗರಕ್ಷಕರ ಜೊತೆಗೆ ಮಕ್ಕಳು ಕೂಡ ಇದ್ದಾರೆ. ಸಧ್ಯ ಗಾಯಾಳುಗಳನ್ನು ನಗರದ ಪ್ರಮುಖ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ದಾವ್ಲತ್‌ಝೈ ಹೇಳಿದ್ದಾರೆ.