ಕರ್ನಾಟಕ

karnataka

ETV Bharat / international

ಪ್ರಧಾನಿ ಪ್ರಚಾರದ ವೇಳೆ ಆತ್ಮಾಹುತಿ ಬಾಂಬ್​ ದಾಳಿ​: 26 ಜನರು ಸಾವು! - ಅಫ್ಘಾನ್​ ಪ್ರಧಾನಿ ಸುದ್ದಿ

ಪ್ರಧಾನಿ ನಡೆಸುತ್ತಿದ್ದ ಚುನಾವಣಾ ಪ್ರಚಾರದಲ್ಲಿ ಆತ್ಮಾಹುತಿ ಬಾಂಬ್​ ದಾಳಿ ನಡೆಸಲಾಗಿದ್ದು, ಸ್ಪೋಟದಲ್ಲಿ ನಾಲ್ವರು ಯೋಧರು ಸೇರಿದಂತೆ 26ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ.

ಕೃಪೆ: Twitter

By

Published : Sep 17, 2019, 8:06 PM IST

ಕಾಬೂಲ್​: ಅಫ್ಘಾನ್​ ಪ್ರಧಾನಿ ನಡೆಸುತ್ತಿದ್ದ ಚುನಾವಣಾ ಪ್ರಚಾರದಲ್ಲಿ ಆತ್ಮಾಹುತಿ ಬಾಂಬ್​ ದಾಳಿ ನಡೆದಿದೆ. ಘಟನೆಯಲ್ಲಿ 24 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿರುವ ಘಟನೆ ಕಾಬೂಲ್​ನ ಚರಿಕರ್​ನಲ್ಲಿ ನಡೆದಿದೆ.

ಅಫ್ಘಾನಿಸ್ತಾನದಲ್ಲಿ ಅಧ್ಯಕ್ಷರ ಚುನಾವಣೆಗೆ ಸೆಪ್ಟಂಬರ್​ 28ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ 'ಹಸಿರು ಪ್ರದೇಶ'ವೆಂದೇ ಕರೆಯಲ್ಪಡುವ ನಗರದಲ್ಲಿ ಅಫ್ಘಾನ್​ ಪ್ರಧಾನಿ ಅಶ್ರಫ್​ ಘನಿ ಕ್ಯಾಂಪೇನ್ ಕೈಗೊಂಡಿದ್ದರು. ಈ ಸಂದರ್ಭಕ್ಕಾಗಿ ಕಾಯುತ್ತಿದ್ದ ಉಗ್ರರು ಬಾಂಬ್​ ದಾಳಿ ಸ್ಫೋಟಿಸಿದ್ದಾರೆ.

ಘಟನೆಯಲ್ಲಿ ನಾಲ್ವರು ಯೋಧರು ಸೇರಿದಂತೆ 26 ಜನ ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ದಾಳಿಯಲ್ಲಿ ಪ್ರಧಾನಿ ಘನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಪ್ರದೇಶದಲ್ಲಿ ರಕ್ಷಣಾ ಇಲಾಖೆ, ಅಮೆರಿಕ ರಾಯಭಾರಿ ಕಚೇರಿ, ಪ್ರಧಾನಿ ಕಾರ್ಯಾಲಯ ಸೇರಿದಂತೆ ಪ್ರಮುಖ ಕಚೇರಿಗಳಿವೆ.

ತಾಲಿಬಾನ್​ ಉಗ್ರರು ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ.

ABOUT THE AUTHOR

...view details