ಕರ್ನಾಟಕ

karnataka

ETV Bharat / international

ಜಪಾನ್​ನ ಫುಕಾಶಿಮಾ ಕರಾವಳಿಯಲ್ಲಿ ಪ್ರಬಲ ಭೂಕಂಪ! - ಜಪಾನ್​ನಲ್ಲಿ ಪ್ರಬಲ ಭೂಕಂಪ

ಭೂ ಕಂಪನವು ಜಪಾನ್​ ಸಮಯ 11.08ರ ವೇಳೆಗೆ ಪೆಸಿಫಿಕ್​ ಸಾಗರದ 60 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ. ಭೂಕಂಪನವು 7.3ರ ತೀವ್ರತೆ ಹೊಂದಿದ್ದು, ಪ್ರಾಥಮಿಕ ಹಂತದಲ್ಲಿ 7.1ರಿಂದ ಹೆಚ್ಚಳವಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

Earthquake in Japan
Earthquake in Japan

By

Published : Feb 14, 2021, 12:34 AM IST

ಟೋಕಿಯೊ (ಜಪಾನ್):ಈಶಾನ್ಯ ಜಪಾನ್‌ನ ಕರಾವಳಿಯಲ್ಲಿ ಶನಿವಾರ ತಡರಾತ್ರಿ ಪ್ರಬಲ ಭೂಕಂಪ ಸಂಭವಿಸಿದೆ. ಫುಕುಶಿಮಾ, ಮಿಯಾಗಿ ಮತ್ತು ಇತರ ಪ್ರದೇಶಗಳು ನಡುಗಿದ್ದು, ಸುನಾಮಿಯ ಭೀತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ವರ್ಷಗಳ ಹಿಂದೆ ಭಾರಿ ಭೂಕಂಪ ಮತ್ತು ಸುನಾಮಿಯ ನಂತರ ಫುಕುಶಿಮಾ ಡೈ-ಇಚಿ ಪರಮಾಣು ಸ್ಥಾವರಕ್ಕೆ ಧಕ್ಕೆಯಾಗಿತ್ತು. ಆಗ ಸುಮಾರು 18 ಸಾವಿರ ಜನರು ಮೃತಪಟ್ಟಿದ್ದರು. 'ತಡರಾತ್ರಿ ಸಂಭವಿಸಿದ ಭೂಕಂಪನಿದಿಂದ ಸ್ಥಾವರಕ್ಕೆ ಯಾವುದೇ ವಿಧದ ಧಕ್ಕೆಯಾಗಿಲ್ಲ' ಎಂದು ಟೋಕಿಯೋ ಎಲೆಕ್ಟ್ರಿಕ್ ಪವರ್ ಕಂಪನಿ ಹೇಳಿದೆ.

ಇದನ್ನೂ ಓದಿ: ದ್ವೇಷ ತೀರಿಸಿಕೊಳ್ಳಲು ಟ್ರಂಪ್​​ ವಿರುದ್ಧ ದೋಷಾರೋಪಣೆ; ವಕೀಲ ವ್ಯಾನ್ ಡೆರ್ ವೀನ್ ಪ್ರತಿಪಾದನೆ

ಭೂಕಂಪನವು ಜಪಾನ್​ ಸಮಯ 11.08ರ ವೇಳೆಗೆ ಪೆಸಿಫಿಕ್​ ಸಾಗರದ 60 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ. ಭೂಕಂಪನವು 7.3ರ ತೀವ್ರತೆ ಹೊಂದಿದ್ದು, ಪ್ರಾಥಮಿಕ ಹಂತದಲ್ಲಿ 7.1ರಿಂದ ಹೆಚ್ಚಳವಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಪೂರ್ವ ಜಪಾನ್‌ನ ತೊಹುಕು ಪ್ರದೇಶದ ಲಕ್ಷಾಂತರ ಮನೆಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಮನೆಗಳಲ್ಲಿ ಕಂಪನದ ಅನುಭವವುಂಟಾಗಿದೆ.

ABOUT THE AUTHOR

...view details