ಕರ್ನಾಟಕ

karnataka

ETV Bharat / international

ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪನ: ರಿಕ್ಟರ್‌ ಮಾಪಕದಲ್ಲಿ 6.5 ರಷ್ಟು ತೀವ್ರತೆ ದಾಖಲು

ಇಂಡೋನೇಷ್ಯಾಗೆ ಮತ್ತೆ ಭೂಕಂಪನ ಅಪ್ಪಳಿಸಿದ್ದು, ರಿಕ್ಟರ್ ಮಾಪಕದಲ್ಲಿ 6.5 ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕ ಭೂ ವಿಜ್ಞಾನ ಸಮೀಕ್ಷೆ (ಯುಎಸ್‌ಜಿಎಸ್) ವರದಿ ಮಾಡಿದೆ.

ಇಂಡೋನೇಷ್ಯಾ

By

Published : Sep 26, 2019, 9:43 AM IST

ಇಂಡೋನೇಷ್ಯಾ: ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪನ ಅಪ್ಪಳಿಸಿದ್ದು, ರಿಕ್ಟರ್ ಮಾಪಕದಲ್ಲಿ 6.5 ರಷ್ಟು ತೀವ್ರತೆ ದಾಖಲಾಗಿದೆ.

ಅಮೆರಿಕ ಭೂ ವಿಜ್ಞಾನ ಸಮೀಕ್ಷೆ (ಯುಎಸ್‌ಜಿಎಸ್) ವರದಿ ಪ್ರಕಾರ, ಮಧ್ಯ ಇಂಡೋನೇಷ್ಯಾದ ಮಾಲುಕು ಪ್ರಾಂತ್ಯದ ಸೆರಾಮ್ ದ್ವೀಪಗಳಿಗೆ 8 ಕಿ.ಮೀ ದೂರದಲ್ಲಿ ಹಾಗೂ ಸುಮಾರು 29.9 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ.

ಭೂಕಂಪನದಿಂದ ಯಾವುದೇ ಸಾವು - ನೋವು, ಹಾನಿ ಉಂಟಾಗಿರುವ ಬಗ್ಗೆ ಈವರೆಗೂ ತಿಳಿದು ಬಂದಿಲ್ಲ. ಹಾಗೆಯೇ ಯಾವುದೇ ಸುನಾಮಿಯ ಎಚ್ಚರಿಕೆಯನ್ನೂ ನೀಡಲಾಗಿಲ್ಲ.

ಇಂಡೋನೇಷ್ಯಾವು 'ರಿಂಗ್ ಆಫ್ ಫೈರ್' (ಬೆಂಕಿಯ ಉಂಗುರ) ಪ್ರದೇಶದಲ್ಲಿದ್ದು, ಇದು ಪೆಸಿಫಿಕ್ ಮಹಾಸಾಗರದ ಭಾಗವಾಗಿದೆ. ಹೀಗಾಗಿ ಇಂಡೋನೇಷ್ಯಾವು ಆಗಾಗ ಭೂಕಂಪ ಮತ್ತು ಜ್ವಾಲಾಮುಖಿ ಸ್ಫೋಟಗಳಿಗೆ ಗುರಿಯಾಗುತ್ತಿರುತ್ತದೆ.

ABOUT THE AUTHOR

...view details