ಕರ್ನಾಟಕ

karnataka

ETV Bharat / international

ಇಲ್ಲಿನ ತಂತ್ರಜ್ಞಾನ ಸಚಿವಾಲಯ ಉಸ್ತುವಾರಿ ಇನ್ಮುಂದೆ ಅಧ್ಯಕ್ಷರ ಆಡಳಿತ ವ್ಯಾಪ್ತಿಗೆ - ಅಧ್ಯಕ್ಷ ಗೋಟಬಯಾ ರಾಜಪಕ್ಷೆ

ಶ್ರೀಲಂಕಾದ ತಂತ್ರಜ್ಞಾನ ಸಚಿವಾಲಯವನ್ನು ಅಧ್ಯಕ್ಷರ ಆಡಳಿತ ವ್ಯಾಪ್ತಿಗೆ ತರಲಾಗುವ ಕುರಿತು ಪ್ರಕರಣೆಯಲ್ಲಿ ತಿಳಿಸಲಾಗಿದೆ. ಈ ಮೂಲಕ ತಂತ್ರಜ್ಞಾನ ಆಧಾರಿತ ಸಮಾಜದ ರಚನೆಗೆ ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

sri-lankan-president
ಅಧ್ಯಕ್ಷ ಗೋಟಬಯಾ ರಾಜಪಕ್ಷೆ

By

Published : Nov 27, 2020, 1:34 PM IST

ಕೊಲೊಂಬೊ (ಶ್ರೀಲಂಕಾ):ತಂತ್ರಜ್ಞಾನ ಆಧಾರಿತ ಸಮಾಜದ ರಚನೆಗಾಗಿ ಇಲ್ಲಿನ ತಂತ್ರಜ್ಞಾನ ಸಚಿವಾಲಯದ ಆಡಳಿತವನ್ನು ಅಧ್ಯಕ್ಷ ಗೋಟಬಯಾ ರಾಜಪಕ್ಷೆ ಅವರ ವ್ಯಾಪ್ತಿಗೆ ತರಲಾಗಿದೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ದೃಢಪಡಿಸಿದೆ.

21ನೇ ಶತಮಾನವನ್ನು ಜ್ಞಾನ ಕೇಂದ್ರಿತ ಶತಮಾನ ಎಂದು ಪರಿಗಣಿಸಲಾಗಿದ್ದು, ಈ ಹಿನ್ನೆಲೆ ತಂತ್ರಜ್ಞಾನ ಆಧಾರಿತ ಸಮಾಜ ನಿರ್ಮಿಸಲು ಸರ್ಕಾರ ಶ್ರಮಿಸಲಿದೆ ಎಂದು ಕಚೇರಿ ಮಾಹಿತಿ ನೀಡಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದಷ್ಟೇ ಅಲ್ಲದೆ ಕೃಷಿ, ಕೈಗಾರಿಕೆ ಮತ್ತು ಸೇವೆಗಳು ಸೇರಿದಂತೆ ಆರ್ಥಿಕ ವಲಯದ ಕ್ಷೇತ್ರಗಳು ಭವಿಷ್ಯದಲ್ಲಿ ತಂತ್ರಜ್ಞಾನವನ್ನೇ ಅವಲಂಭಿಸಲಿದೆ ಎಂದಿದೆ.

ತಂತ್ರಜ್ಞಾನ ಸಚಿವಾಲಯದ ಅಡಿ ಮಾರುಕಟ್ಟೆ ಪ್ರಕ್ರಿಯೆ ಹಾಗೂ ರಾಜ್ಯ ಆಡಳಿತದಲ್ಲಿ ಸರಳೀಕರಣ ತರಲಾಗುವುದು. ಜ್ಞಾನ ವಿನಿಮಯ ಸಾಧನವನ್ನಾಗಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು, ಡಿಜಿಟಲ್ ಆಡಳಿತದ ವಿಸ್ತರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶಾದ್ಯಂತ ಅಂತಾರಾಷ್ಟ್ರೀಯ ಎಲೆಕ್ಟ್ರಾನಿಕ್ ಪಾವತಿ ಯೋಜನೆ, ಹೈಸ್ಪೀಡ್ ಡೇಟಾ ವಿನಿಮಯ ವ್ಯವಸ್ಥೆ ಮತ್ತು ಇದಕ್ಕೆ ಸಂಬಂಧಿಸಿದ ಮೊಬೈಲ್ ನೆಟ್​​​ವರ್ಕ್​​​​ ಸ್ಥಾಪನೆ ಕುರಿತಂತೆ ಅಗತ್ಯ ಕ್ರಮಗಳನ್ನು ಸಚಿವಾಲಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದೆ.

ABOUT THE AUTHOR

...view details