ಕರ್ನಾಟಕ

karnataka

ETV Bharat / international

ಧರ್ಮನಿಂದನೆ ಆರೋಪ: ಲಂಕಾ ವ್ಯಕ್ತಿಯ ಹತ್ಯೆಗೈದು ಸುಟ್ಟುಹಾಕಿದ ಗುಂಪುಗಳು - ಇಸ್ಲಾಮಿಕ್ ಪಕ್ಷವಾದ ತೆಹ್ರೀಕ್ -ಎ-ಲಬ್ಬೈಕ್ ಪಾಕಿಸ್ತಾನ್

ಧರ್ಮವನ್ನ ಅವಹೇಳನ ಮಾಡಿದ್ದಾನೆ ಎಂದು ಆರೋಪಿಸಿದ ಪಾಕ್​ ಗುಂಪು ಶ್ರೀಲಂಕಾ ಮೂಲದ ವ್ಯಕ್ತಿಯನ್ನ ಹತ್ಯೆಗೈದು ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ.

sri-lankan-national-lynched-by-mob-in-pakistan
ಲಂಕಾ ವ್ಯಕ್ತಿಯ ಹತ್ಯೆಗೈದು ಸುಟ್ಟುಹಾಕಿದ ಗುಂಪುಗಳು

By

Published : Dec 6, 2021, 11:00 PM IST

ಲಾಹೋರ್: ಧರ್ಮನಿಂದನೆಯ ಆರೋಪದ ಮೇಲೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಗುಂಪೊಂದು ವ್ಯಕ್ತಿಯೋರ್ವನಿಗೆ ಥಳಿಸಿ ಸುಟ್ಟು ಹಾಕಿದ್ದ ಘಟನೆ ನಡೆದಿದೆ. ಶ್ರೀಲಂಕಾ ಮೂಲದ ನಂದಶ್ರೀ ಪಿ ಕುಮಾರ್ ದೀಯವಡನಗೆ ಎಂಬುವನಿಗೆ ಥಳಿಸಿ ಸುಟ್ಟು ಹಾಕಲಾಗಿದೆ.

ಲಾಹೋರ್‌ನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಸಿಯಾಲ್​​ಕೋಟ್ ಜಿಲ್ಲೆಯಲ್ಲಿ ಶುಕ್ರವಾರ 800ಕ್ಕೂ ಹೆಚ್ಚು ಜನರ ಗುಂಪು, ಇಸ್ಲಾಮಿಕ್ ಪಕ್ಷವಾದ ತೆಹ್ರೀಕ್ -ಎ-ಲಬ್ಬೈಕ್ ಪಾಕಿಸ್ತಾನ್ ಬೆಂಬಲಿಗರು ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮ್ಯಾನೇಜರ್ ಆಗಿದ್ದ ನಂದಶ್ರೀ ಪಿ ಕುಮಾರ್ ಅವರನ್ನು ಹತ್ಯೆಗೈದ ಗುಂಪು ಬೆಂಕಿ ಹಚ್ಚಿ ಸುಟ್ಟುಹಾಕಿದ್ದರು.

ಶ್ರೀಲಂಕಾ ಹೈಕಮಿಷನ್ ಅಧಿಕಾರಿಗಳು ಸೋಮವಾರ ಮುಂಜಾನೆ ಇಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಜೊತೆಗೆ ಪಂಜಾಬ್ ಅಲ್ಪಸಂಖ್ಯಾತ ಸಚಿವ ಇಜಾಜ್ ಆಲಂ ಅವರು ಲಾಹೋರ್ ವಿಮಾನ ನಿಲ್ದಾಣದಲ್ಲಿ ಅವರಿಗೆ ಮೃತದೇಹವನ್ನು ಹಸ್ತಾಂತರಿಸಿದರು. ಶ್ರೀಲಂಕಾ ಏರ್​ಲೈನ್ಸ್​ ವಿಮಾನದಲ್ಲಿ ಮೃತದೇಹವನ್ನು ಕೊಲಂಬೋಗೆ ಸಾಗಿಸಲಾಯಿತು ಎಂದು ಪಂಜಾಬ್ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು 3 ಮಕ್ಕಳ ದಾರುಣ ಸಾವು: ಮುಗಿಲು ಮುಟ್ಟಿದ ಆಕ್ರಂದನ

ABOUT THE AUTHOR

...view details