ಕೊಲಂಬೊ :ತೆಂಗಿನಕಾಯಿ ಕೊರತೆಯ ಬಗ್ಗೆ ಜನರಿಗೆ ಸಂದೇಶ ರವಾನಿಸಲು ಶ್ರೀಲಂಕಾದ ತೆಂಗಿನಕಾಯಿ ರಾಜ್ಯ ಸಚಿವ ಅರುಂಡಿಕಾ ಫರ್ನಾಂಡೊ ತೆಂಗಿನ ಮರ ಹತ್ತಿರುವ ಘಟನೆ ನಡೆದಿದೆ.
ದ್ವೀಪರಾಷ್ಟ್ರದಲ್ಲಿನ ತೆಂಗಿನ ಕಾಯಿ ಸಮಸ್ಯೆ ಬಗ್ಗೆ ಜನತೆಗೆ ಸಂದೇಶ ನೀಡಲು ಕಲ್ಪವೃಕ್ಷ ಮರವೇರಿದ ಸಚಿವ, 'ಸ್ಥಳೀಯ ಕೈಗಾರಿಕೆಗಳು ವ್ಯಾಪಕ ಬೇಡಿಕೆ ಮತ್ತು ದೇಶೀಯ ಯಥೇಚ್ಛ ಬಳಕೆಯಿಂದಾಗಿ ಶ್ರೀಲಂಕ, 700 ಮಿಲಿಯನ್ ತೆಂಗಿನಕಾಯಿ ಕೊರತೆ ಎದುರಿಸುತ್ತಿದೆ ಎಂದು ಹೇಳಿದರು.