ಸಿಂಗಪೂರ್: ಮುಂಬೈನಿಂದ ಹೊರಟ ಸಿಂಗಪೂರ್ ಏರ್ಲೈನ್ಸ್ (SIA)ನಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಬಂದ ಹಿನ್ನೆಲೆ ಚಾಂಗಿ ಏರ್ಪೋರ್ಟ್ನಲ್ಲಿ ಇಂದು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಆನಂತರ ಅದೊಂದು ಹುಸಿ ಬೆದರಿಕೆ ಕರೆ ಎಂದು ತಿಳಿದುಬಂದಿದೆ.
ಮುಂಬೈ-ಸಿಂಗಪೂರ್ ವಿಮಾನ ತುರ್ತು ಲ್ಯಾಂಡಿಂಗ್ : ಪ್ರಯಾಣಿಕರೆಲ್ಲ ಬದುಕುವ ಆಸೆನೇ ಕೈಬಿಟ್ಟಿದ್ದರು.. - ಬಾಂಬ್ ಬೆದರಿಕೆ
ಹುಸಿ ಬಾಂಬ್ ಬೆದರಿಕೆ ಕರೆ ಬಂದ ಕಾರಣ ಮುಂಬೈ-ಸಿಂಗಪೂರ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.. ಆದರೆ, ಅದೊಂದು ಹುಸಿ ಕರೆ ಎಂದು ಗೊತ್ತಾದ ಮೇಲೆ ಮತ್ತೆ ವಿಮಾನ ಟೇಕಾಫ್ ಆಗಿದೆ.

SQ 423 ವಿಮಾನದಲ್ಲಿ ಬಾಂಬ್ ಇದೆ ಎಂಬ ಸಂದೇಶ ಪೈಲಟ್‌ಗೆ ತಲುಪಿತ್ತು. ಈ ಕಾರಣ ಇಂದು ಬೆಳಗ್ಗೆ 8 ಗಂಟೆಗೆ ಚಾಂಗಿ ಏರ್ಪೋರ್ಟ್ನಲ್ಲಿ ವಿಮಾನವನ್ನ ತುರ್ತು ಭೂಸ್ಪರ್ಶ ಮಾಡಲಾಗಿದೆ. ತಕ್ಷಣ ವಿಮಾನದಲ್ಲಿದ್ದ ಪ್ರಯಾಣಿಕರನ್ನ ಕೆಳಗಿಳಿಸಲಾಯಿತು. ಆದರೆ, ಓರ್ವ ಮಹಿಳೆ ಹಾಗೂ ಮಗುವನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ವಿಮಾನದಲ್ಲಿ 263 ಪ್ರಯಾಣಿಕರಿದ್ದರು.
ಈ ವಿಮಾನ ನಿನ್ನೆ ರಾತ್ರಿ 11.35ಕ್ಕೆ ಮುಂಬೈನಿಂದ ಸಿಂಗಪೂರ್ಗೆ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಕರೆ ಬಂದ ಹಿನ್ನೆಲೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಂಗಪೂರ್ ಏರ್ಲೈನ್ಸ್ನ ವಕ್ತಾರ ಹೇಳಿಕೆ ನೀಡಿದ್ದಾರೆ.ಸದ್ಯಕ್ಕೆ ಹೆಚ್ಚು ಮಾಹಿತಿ ನೀಡಲಾಗದು ಎಂದೂ ಅವರು ಹೇಳಿದ್ದಾರೆ.