ಕರ್ನಾಟಕ

karnataka

ETV Bharat / international

ಸ್ಪುಟ್ನಿಕ್ ವಿ ಲಸಿಕೆ ಶೇಕಡಾ 95ಕ್ಕಿಂತ ಹೆಚ್ಚು ಪರಿಣಾಮಕಾರಿ: ಪುಟಿನ್ ಘೋಷಣೆ

ಕೋವಿಡ್-19 ಲಸಿಕೆಯನ್ನು ಕಂಡು ಹಿಡಿದು ಉತ್ಪಾದಿಸಲು ಪ್ರಾರಂಭಿಸಿದ ವಿಶ್ವದ ಮೊದಲ ದೇಶ ರಷ್ಯಾ. ನಮ್ಮ ಸ್ಪುಟ್ನಿಕ್ ವಿ ಲಸಿಕೆ ಶೇಕಡಾ 95ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

putin
putin

By

Published : Dec 17, 2020, 8:46 PM IST

ಮಾಸ್ಕೋ (ರಷ್ಯಾ): ವಿಶ್ವದ ಮೊದಲ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ವಿ ಶೇಕಡಾ 95ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

"ಕೋವಿಡ್-19 ಲಸಿಕೆಯನ್ನು ಕಂಡುಹಿಡಿದು ಉತ್ಪಾದಿಸಲು ಪ್ರಾರಂಭಿಸಿದ ವಿಶ್ವದ ಮೊದಲ ದೇಶ ರಷ್ಯಾ. ನಮ್ಮಲ್ಲಿ ಉತ್ತಮ ಲಸಿಕೆ ಇದ್ದು, ಇದು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂದು ಪುಟಿನ್ ಹೇಳಿರುವುದಾಗಿ"ಎಮ್ಎಫ್ಎ ರಷ್ಯಾ ಟ್ವೀಟ್ ಮಾಡಿದೆ.

ಕ್ಲಿನಿಕಲ್ ಪ್ರಯೋಗಗಳ ವಿಶ್ಲೇಷಣೆಯ ಆಧಾರದ ಮೇಲೆ, ಸ್ಪುಟ್ನಿಕ್ ವಿ ಕೋವಿಡ್ -19 ಲಸಿಕೆಯ ಶೇಕಡಾ 91.4 ಪರಿಣಾಮಕಾರಿ ಎಂದು ದೃಢಪಟ್ಟಿದೆ ಎಂದು ಗಮಲೇಯ ನ್ಯಾಷನಲ್ ಸೆಂಟರ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ತಿಳಿಸಿದೆ.

ಆಗಸ್ಟ್ 11ರಂದು ವಿಶ್ವದ ಮೊದಲ ಕೋವಿಡ್-19 ಲಸಿಕೆಯನ್ನು ನೋಂದಾಯಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಯಿತು.

ABOUT THE AUTHOR

...view details