ಮಾಸ್ಕೋ :ಎರಡು ಡೋಸ್ ಸ್ಪುಟ್ನಿಕ್ ವಿ ಕೋವಿಡ್‌ನ ಒಮಿಕ್ರಾನ್ ವೈರಸ್ ಅನ್ನು ತಟಸ್ಥಗೊಳಿಸುವ ಎರಡು ಪಟ್ಟು ಹೆಚ್ಚು ಪ್ರತಿಕಾಯಗಳನ್ನು ಒದಗಿಸುತ್ತದೆ ಎಂದು ಅಧ್ಯಯನ ಹೇಳಿದೆ.
ಗಮಲೇಯಾ ನ್ಯಾಷನಲ್ ರಿಸರ್ಚ್ ಸೆಂಟರ್ ಆಫ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿ ಹಾಗೂ ರಷ್ಯಾದ ನೇರ ಹೂಡಿಕೆ ನಿಧಿ ಈ ಅಧ್ಯಯನವನ್ನು ನಡೆಸಿದೆ. ಒಟ್ಟು 2.1 ಪಟ್ಟು ಹೆಚ್ಚು ಹಾಗೂ ವ್ಯಾಕ್ಸಿನೇಷನ್ ಮಾಡಿದ 3 ತಿಂಗಳ ನಂತರ 2.6 ಪಟ್ಟು ಹೆಚ್ಚು ಒಮಿಕ್ರಾನ್ ವಿರುದ್ಧ ಪರಿಣಾಮಕಾರಿ ಎಂದು ವಿವರಿಸಿದೆ.
ಇನ್‌ಸ್ಟಿಟ್ಯೂಟ್ ಮತ್ತು ಗಮಲೇಯಾ ಕೇಂದ್ರವನ್ನು ಪ್ರತಿನಿಧಿಸುವ ಜಂಟಿ ಇಟಾಲಿಯನ್-ರಷ್ಯನ್ ಸಂಶೋಧಕರ ತಂಡವು ಸಾಂಕ್ರಾಮಿಕ ರೋಗಗಳ ಪ್ರಮುಖ ಇಟಲಿಯ ಸಂಶೋಧನಾ ಸಂಸ್ಥೆಯಲ್ಲಿ ಸ್ಪುಟ್ನಿಕ್ ವಿ ಲಸಿಕೆ ಪಡೆದಿದ್ದ ವ್ಯಕ್ತಿಗಳ ಸೆರಾ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿ ಅಧ್ಯಯನ ನಡೆಸಿದೆ.
ಸ್ಪುಟ್ನಿಕ್ ವಿ ಲಸಿಕೆ ಪಡೆದವರಲ್ಲಿ ಶೇ.83.3ರಷ್ಟು ವ್ಯಕ್ತಿಗಳ ದೇಹದಲ್ಲಿ ಒಮಿಕ್ರಾನ್ ರೂಪಾಂತರವನ್ನು ತಟಸ್ಥಗೊಳಿಸಲು ಸಮರ್ಥವಾಗಿದೆ. ಹೀಗಾಗಿ, ಇತರ ಲಸಿಕೆಗಳಿಗೆ ಹೋಲಿಸಿದರೆ ಸ್ಪುಟ್ನಿಕ್ ವಿ ಒಮಿಕ್ರಾನ್‌ನನ್ನು ಹೆಚ್ಚಿನ ಪ್ರಮಾಣದಲ್ಲಿ ತಟಸ್ಥಗೊಳಿಸುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದ ರಾಷ್ಟ್ರೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ ಹೇಳಿದ್ದಾರೆ.
ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ