ಕರ್ನಾಟಕ

karnataka

ETV Bharat / international

ತಾಲಿಬಾನ್​ ದಾಳಿ: ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​ನ ವಕ್ತಾರ ಫಾಹೀಮ್ ದಾಷ್ಟಿ ಸಾವು

ಪಂಜ್​ಶೀರ್​ನ ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​ನ ವಕ್ತಾರ ಫಾಹೀಮ್ ದಾಷ್ಟಿ ತಾಲಿಬಾನ್​ಗಳ ವಿರುದ್ಧದ ಹೋರಾಟದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

Fahim Dashti
ಫಾಹೀಮ್ ದಾಷ್ಟಿ

By

Published : Sep 6, 2021, 7:31 AM IST

Updated : Sep 6, 2021, 7:39 AM IST

ಕಾಬೂಲ್: ಪಂಜ್​ಶೀರ್ ಪ್ರಾಂತ್ಯದಲ್ಲಿ ಭಾನುವಾರ ನಡೆದ ತಾಲಿಬಾನ್​ಗಳ ವಿರುದ್ಧದ ಹೋರಾಟದಲ್ಲಿ ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​ನ ವಕ್ತಾರ ಫಾಹೀಮ್ ದಾಷ್ಟಿ ಮೃತಪಟ್ಟಿದ್ದಾರೆ ಎಂದು ಪಂಜ್​ಶೀರ್ ಮೂಲವನ್ನು ಉಲ್ಲೇಖಿಸಿ ಟಾಲೋ ವರದಿ ಮಾಡಿದೆ. ದಾಷ್ಟಿಯು ಜಮಿಯತ್-ಇ-ಇಸ್ಲಾಮಿ ಪಕ್ಷದ ಹಿರಿಯ ಸದಸ್ಯ ಮತ್ತು ಅಫ್ಘಾನ್ ಪತ್ರಕರ್ತರ ಒಕ್ಕೂಟದ ಸದಸ್ಯರಾಗಿದ್ದರು ಎನ್ನಲಾಗಿದೆ.

ಪಂಜ್​ಶೀರ್ ಕಣಿವೆ ಕಾಬೂಲ್​ನಿಂದ ಉತ್ತರಕ್ಕೆ 90 ಮೈಲಿ ದೂರದಲ್ಲಿರುವ ಹಿಂದೂ ಕುಶ್ ಪರ್ವತದಲ್ಲಿದೆ. ಈ ಪ್ರದೇಶವನ್ನು ಕೈವಶ ಮಾಡಿಕೊಳ್ಳಲು ತಾಲಿಬಾನ್​ಗಳು ಶತಪ್ರಯತ್ನ ಮಾಡುತ್ತಿದ್ದಾರೆ. ಪಂಜ್‌ಶೀರ್ ಪ್ರಾಂತ್ಯದ ಮೇಲಿನ ಯುದ್ಧ ಶುಕ್ರವಾರ ರಾತ್ರಿಯಿಂದ ಮತ್ತೆ ಪ್ರಾರಂಭಗೊಂಡಿದ್ದು, ಈ ಸಂದರ್ಭದಲ್ಲಿ ದಾಷ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ತಾಲಿಬಾನ್​ಗಳು ಪಂಜ್​ಶೀರ್​ ಪ್ರಾಂತ್ಯದಿಂದ ಹೊರನಡೆದರೆ ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​ಗಳು ಹೋರಾಟವನ್ನು ನಿಲ್ಲಿಸಲು ಮತ್ತು ಮಾತುಕತೆ ಆರಂಭಿಸಲು ಸಿದ್ಧವಾಗಿವೆ ಎಂದು ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯದ ನಾಯಕ ಅಹ್ಮದ್ ಮಸೂದ್ ಭಾನುವಾರ ತಿಳಿಸಿದ್ದಾರೆ.

ಧರ್ಮ ಮತ್ತು ನೈತಿಕತೆಯ ತತ್ವಗಳಿಗೆ ಅನುಗುಣವಾಗಿ ತಾಲಿಬಾನ್‌ನೊಂದಿಗಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಲು ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​​ ಬದ್ಧವಾಗಿದೆ ಎಂದು ಮಸೂದ್ ಹೇಳಿದ್ದಾರೆ.

Last Updated : Sep 6, 2021, 7:39 AM IST

ABOUT THE AUTHOR

...view details